-->
ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು ;‌ BJP ಶಾಸಕ ರಘುಪತಿ ಭಟ್

ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು ;‌ BJP ಶಾಸಕ ರಘುಪತಿ ಭಟ್


ರಾಜ್ಯಾದ್ಯಂತ ಮೇ 9 ರಿಂದ ಭಜನೆ, ಹನುಮಾನ್ ಚಾಲೀಸ್ ಅಭಿಯಾನ ನಡೆಸಿ  ಸರ್ಕಾರಕ್ಕೆ ಭಜನಾ ಅಭಿಯಾನದ ಎಚ್ಚರಿಕೆ ನೀಡಿದೆ  ಶ್ರೀರಾಮಸೇನೆ‌. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು
ಆಜಾನ್ ಕುರಿತಾಗಿ ಸರಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಬೇಕು ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 


ಉಡುಪಿಯಲ್ಲಿ ಆಜಾನ್  ಶಬ್ದ ಕಡಿಮೆಯಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳು ಹಾರ್ನ್ ಮೈಕ್ ಗಳನ್ನು ಕೆಳಗೆ ಇಳಿಸುವುದು ಒಳ್ಳೇದು
 ಟವರಿನಿಂದ ಮೈಕನ್ನು ಕೆಳಗಿಟ್ಟು ಸ್ಪೀಕರ್ ಬಾಕ್ಸ್ ಅನ್ನು ಬಳಸಿ. ಧರ್ಮಕೇಂದ್ರದ ಸುತ್ತ ಬಂದವರಿಗೆ ಕೇಳಿದರೆ ಸಾಕು ಇಡೀ ಊರಿಗೆ ಆಜಾನ್, ಮಂತ್ರ ಭಜನೆ ಕೇಳಬೇಕಾಗಿಲ್ಲ
ದೇವಸ್ಥಾನದ ಸುಪ್ರಭಾತಕ್ಕೆ ಸಾರ್ವಜನಿಕರಿಂದ ಆಕ್ಷೇಪ ಗಳು ಇವೆ. ದೇವಸ್ಥಾನ, ಕೃಷ್ಣಮಠದ ಸುತ್ತಮುತ್ತ ಆಕ್ಷೇಪಗಳು ಇವೆ
ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್ ಗಳನ್ನು ಉಪಯೋಗಿಸುವುದು ಸಮಸ್ಯೆ ಪರಿಹಾರ ಅಂತ  ಶಾಸಕ ರಘುಪತಿ ಭಟ್ ಹೇಳಿದರು..

Ads on article

Advertise in articles 1

advertising articles 2

Advertise under the article