-->
ಉಡುಪಿಯಲ್ಲಿ 25 ವರ್ಷದ ಯುವತಿ ಆತ್ಮಹತ್ಯೆ;  ಅನ್ಯ ಕೋಮಿನ ಯುವಕನ ಪ್ರಚೋದನೆ ?

ಉಡುಪಿಯಲ್ಲಿ 25 ವರ್ಷದ ಯುವತಿ ಆತ್ಮಹತ್ಯೆ; ಅನ್ಯ ಕೋಮಿನ ಯುವಕನ ಪ್ರಚೋದನೆ ?


ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ  ಯತ್ನಿಸಿದ್ದ ಯುವತಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ 
ಉಡುಪಿ ಜಿಲ್ಲೆಯ ಕುಂದಾಪುರದ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ.


 ಶಿಲ್ಪಾ (25) ಸಾವನ್ನಪ್ಪಿದ  ಯುವತಿ. ಸದ್ಯ ಯುವತಿಯ ಸಾವಿನ ಹಿಂದೆ ಆಕೆಯ ಅನ್ಯ ಕೋಮಿನ  ಕೈವಾಡವಿದೆ ಎಂದು ಆರೊಪ ಕೇಳಿ ಬಂದಿದೆ. ಯುವತಿ ಬಟ್ಟೆ ಅಂಗಡಿಯೊಂದರಲ್ಲಿ 3 ವರ್ಷದಿಂದ ಕೆಲಸ ಮಾಡಿಕೊಂಡಿದ್ದು ಯುವತಿ, ಕೋಟೇಶ್ವರದ ಅನ್ಯಕೋಮಿನ ಯುವಕನೊಂದಿಗೆ ಸಂಪರ್ಕ ಹೊಂದಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಯುವಕನ ಮನೆಗೆ ಹೋಗಿ ಬರುತ್ತಿದ್ದು, ಆತನೊಂದಿಗೆ ದೈಹಿಕ ಸಂಪರ್ಕ ಕೂಡ ಹೊಂದಿರುತ್ತಾಳೆ ಎನ್ನಲಾಗಿದೆ.

 ಮೇ 23 ರಂದು ಶಿಲ್ಪಾ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ 25 ರಂದು ಮೃತಪಟ್ಟಿದ್ದಾಳೆ. ಆಕೆಯ ಸಾವಿಗೆ ಯುವಕನ ಪ್ರಚೋದನೆ ಕಾರಣ ಎಂದು ಯವತಿಯ ಅಣ್ಣ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Ads on article

Advertise in articles 1

advertising articles 2

Advertise under the article