ಉಡುಪಿ ; ಆಯಾಸ ತಣಿಸಲು ಜಲ ಕುಟೀರ (VIDEO)
Tuesday, April 5, 2022
ಉಡುಪಿ ನಗರದಲ್ಲಿ ಬೇಸಿಗೆ ಬಿಸಿಲ ದಗೆ ಹೆಚ್ಚಾಗುತ್ತಿದ್ದು, ಬಿಸಿಲ ತಾಪಕ್ಕೆ ನಗರದಲ್ಲಿ ತಾಪ ಏರಿಕೆ ಸಾರ್ವಜನಿಕರು ತಲೆ ಸುತ್ತು ಬಂದು ಅಸ್ವಸ್ಥರಾದ ಘಟನೆಗಳು ಕಂಡು ಬರುತ್ತಿದೆ.
ಹೀಗಾಗಿ ಜೋಸ್ ಆಲುಕ್ಕಾಸ್ ಮಳಿಗೆಯವರ ಸಹಕಾರದಿಂದ
ಜಿಲ್ಲಾ ನಾಗರಿಕ ಸಮಿತಿ ಜಲ ಕುಟೀರ ಉಡುಪಿ ಸಿಟಿ ನಡುವೆ ತೆರೆದಿದೆ.
ಸಾರ್ವಜನಿಕರು ಆಯಾಸವಾದಾಗ ಬಂದು ಮಣ್ಣಿನ ಕುಡಿಕೆಯಲ್ಲಿ ತುಂಬಿರುವ ತಂಪಾದ ನೀರನ್ನು ಸೇವಿಸಬಹುದಾಗಿದೆ. ಜಿಲ್ಲಾ ನಾಗರಿಕ ಸಮಿತಿಯ ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.