
UDUPI-ಅಕ್ರಮ ಮನೆ ಕೆಡವಿದ ವಿಚಾರದಲ್ಲಿ ಗಲಾಟೆ; ಹರಿದೇಯೋಯ್ತು ಮಾಜಿ ಸಚಿವರ ಶರ್ಟ್ ( VIDEO)
Tuesday, April 5, 2022
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಅಕ್ರಮ ಮನೆ ತೆರವು ವಿಚಾರದಲ್ಲಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆದು, ಗದ್ದಲ ಗಲಾಟೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಶರ್ಟ್ ಹರಿದಿದೆ.
ಮಾಜಿ ಸಚಿವರ ಮೇಲೆ ಗ್ರಾಮ ಪಂಚಾಯತ್ ಪಿಡಿಓ ಹಲ್ಲೆ ಗೈದಿದ್ದಾಗಿ ಕಾಂಗ್ರೆಸ್ ಆರೋಪಿಸಿದೆ. ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಸೇರಿದವರ ಮನೆಯನ್ನು ಅಕ್ರಮ ಮನೆ ಅಂತ ಕಾರಣ ಕೊಟ್ಟು ನೆಲಸಮ ಮಾಡಲಾಯ್ತು. ಇದನ್ನು ಖಂಡಿಸಿ ಇಂದು ಶಿರ್ವ ಗ್ರಾಮ ಪಂಚಾಯತ್ ಮುಂದೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ, ಕಾಂಗ್ರೆಸ್ ಪ್ರತಿಭಟನೆ ನಡೆಸುವಾಗ ಪಂಚಾಯತ್ ನಲ್ಲಿದ್ದ ಪಿಡಿಓ ಅನಂತ ಪದ್ಮನಾಭ ನಾಯಕ್ ಜೊತೆಗೆ ವಾಗ್ವಾದ ನಡೆಯಿತು. ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತರು ಸೇರಿದ ಕಾರಣ ಗಲಾಟೆ ಜೋರಾಗಿ ನಡೆಯಿತು..
ಈ ವೇಳೆ ಕಾಂಗ್ರೆಸ್ ನವರು ನನ್ನನ್ನು ದೂಡಿ ಹಲ್ಲೆ ಮಾಡಲು ಹತ್ನಿಸಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ವಿಡಿಓ ಆರೋಪ ಮಾಡಿದ್ದಾರೆ.. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪಿಡಿಓ ಸೊರಕೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಆರೋಪಿಸಿದರು.