ಉಡುಪಿ;ಅಡಿಕೆ ಮರದ ಕಂಬ ಬಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ದುರ್ಮರಣ
Tuesday, April 5, 2022
ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಕ್ಕಾಗಿ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬ ಕುತ್ತಿಗೆಗೆ ಬಿದ್ದ ಪರಿಣಾಮ ಉಡುಪಿ ಜಿಲ್ಲೆಯ ಕುಂದಾಪುರದ ಹೊಸಂಗಡಿಯ ಪೇಟೆ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಮಚಂದ್ರ ಭಂಡಾರ್ಕರ್ (58) ಸಾವನ್ನಪ್ಪಿದ್ದಾರೆ.
ಸ್ಥಳೀಯವಾಗಿ ಎಲ್ಲಿಯೇ ಧಾರ್ಮಿಕ ಕಾರ್ಯಕ್ರಮಗಳಿದ್ದರೆ ಹಾಜರಾಗುತ್ತಿದ್ದ ಇವರು, ಪ್ರತೀ ಭಜನಾ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿದ್ದವರು.
ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಚಪ್ಪರದ ಅಡಿಕೆ ಮರದ ಕಂಬವು ಮೇಲಿಂದ ಜಾರಿದಾಗ, ತಡೆಯಲು ಹೋದ ವೇಳೆ ಆಯ ತಪ್ಪಿ ಕೆಳಗೆ ಬಿದ್ದು,ಅಡಿಕೆ ಮರ ರಾಮಚಂದ್ರ ಅವರ ಕುತ್ತಿಗೆ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ಪಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.