Udupi- ಹಿಂದುಗಳ ಅಂಗಡಿಯಲ್ಲಿ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತೆ ; ಮುತಾಲಿಕ್
Monday, April 25, 2022
ಅಕ್ಷಯ ತೃತೀಯ ದಿನ ಮುಸ್ಲಿಂ ಆಭರಣ ಮಳಿಗೆಯಲ್ಲಿ ಗೋಲ್ಡ್ ಬ್ಯಾನ್ ವಿಚಾರ ರಾಜ್ಯದಲ್ಲಿ ಬಾರೀ ಸದ್ದು ಮಾಡುತ್ತಿದ್ದು, ಇದೇ ವಿಚಾರದಲ್ಲಿ ಉಡುಪಿಯಲ್ಲಿ ಮಾತನಾಡಿದ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಥರ ಸಂಘರ್ಷ ನಿರಂತರ ಮುಂದುವರೆಯುತ್ತದೆ ಸಮಾಜಕ್ಕೆ , ಜನರಿಗೆ , ದೇಶಕ್ಕೆ ಯಾವುದು ಹಿತ, ಯಾವುದು ಮಾರಕ ಎನ್ನುವುದು ಗೊತ್ತಾಗಿದೆ
ಹಿಂದೂ ಸಂಘಟನೆಗಳಿಂದ ಸಮಾಜ ಜಾಗೃತಿ ಯಾಗಿದೆ ಸಮಾಜಕ್ಕೊಂದು ಕಲ್ಪನೆ, ದೃಷ್ಟಿಕೋನ ಸಿಕ್ಕಿದೆ ಎಂದು ಹೇಳಿದರು. ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀಧಿ ಮಾಡಿ ಹೀಗೆ ಮಾಡಬೇಕೆನ್ನುವುದು ಜನರಿಗೂ ಅನ್ನಿಸಿದೆ.ಅಕ್ಷಯ ತೃತೀಯ ಹಿಂದುಗಳ ಹಬ್ಬ ಹಿಂದುಗಳ ಹಬ್ಬದಂದು ಹಿಂದುಗಳ ಅಂಗಡಿಯಲ್ಲಿ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತೆ ಹಿಂದೂಸ್ತಾನದ ಸುರಕ್ಷತೆಗೆ ಇದು ಅಗತ್ಯ. ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ
ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ ಮುಂದಿನ ದಿನ ಹಲಾಲ್ ಕಟ್ ಮಾಂಸ ಸಂಪೂರ್ಣವಾಗಿ ಹಿಂದೂಗಳು ಖರೀದಿ ಮಾಡುವುದಿಲ್ಲ. ಇದೇ ಮಾದರಿಯ ಹೋರಾಟ ಈ ವಿಚಾರದಲ್ಲೂ ನಡೆಯಲಿದೆ ಕೇರಳ ಮೂಲದ ಜ್ಯುವೆಲ್ಲರಿ ಕಂಪನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿದೆ
ಪರೋಕ್ಷವಾಗಿ ದೇಶದ್ರೋಹಿ ಸಂಘಟನೆಗಳಿಗೆ ಸಹಕಾರ ಕೊಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು..