
Udupi ; ಸದಾ ನೆರವಿಗೆ ಧಾವಿಸುವ ಆಪದ್ಭಾಂಧವ ಈಶ್ವರ್ ಮಲ್ಪೆ ಸಾವಿನ ಜೊತೆ ಮುಖಾಮುಖಿಯಾಗಿ ಗೆದ್ದು ಬಂದರು- Viral video
Tuesday, April 26, 2022
ಕರಾವಳಿಯ ಕಡಲು ಹಾಗೂ ನದಿಯಲ್ಲಿ ದುರಂತ ಸಂಭವಿಸಿದಾಗ ನೆರವಿಗೆ ಧಾವಿಸುವ ಆಪದ್ಭಾಂಧವ ಈಶ್ವರ್ ಮಲ್ಪೆ ,ಇವತ್ತು ಸಾವಿನ ಜೊತೆ ಮುಖಾಮುಖಿಯಾಗಿ ಗೆದ್ದು ಬಂದಿದ್ದಾರೆ.
ಉಡುಪಿಯ ಮಲ್ಪೆಯ ವಢಬಾಂಡೇಶ್ವರದಲ್ಲಿ ಈಶ್ವರ್ ಬೈಕ್ ಮತ್ತು ಬಸ್ ಮುಖಾಮುಖಿ ಢಿಕ್ಕಿ ಹೊಡೆದರೂ ಕೂದಲೆಳೆಯಲ್ಲಿ ಪಾರಾಗಿದ್ದಾರೆ.ಈ ಅಪಘಾತದ ವಿಡಿಯೋ ವೈರಲ್ ಆಗಿದೆ.
ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಈಶ್ವರ್ ಪಾರಾಗಿದ್ದು ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.ಮಲ್ಪೆ ಭಾಗದ ಜನ ಈಶ್ವರ್ ಮಲ್ಪೆಯ ಆರೋಗ್ಯ ವಿಚಾರಿಸಲು ಮನೆಗೆ ಧಾವಿಸುತ್ತಿದ್ದು ಅವರು ಮಾಡಿದ ಪರೋಪಕಾರವೇ ಅವರ ಜೀವ ಉಳಿಸಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ