ಉಡುಪಿ- 75ರ ಇಳಿ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ !
Wednesday, April 27, 2022
75 ವಯಸ್ಸಿನ ಉಡುಪಿಯ ಕನ್ನರ್ಪಾಡಿ ನಿವಾಸಿ ಉಷಾ ಚಡಗ ಅವರು ಡಾಕ್ಟರೇಟ್ ಪದವಿ ಪಡೆದು ಮೆಚ್ಚುಗೆ ಪಡೆದಿದ್ದಾರೆ. ಸುಮಾರು 10 ವರ್ಷಗಳ ಹಿಂದೆ, ತನ್ನ ನಿವೃತ್ತ ಜೀವನದಲ್ಲಿ ಉಡುಪಿಯ ಸಂಸ್ಕ್ರತ ಕಾಲೇಜಿನ ವೇದಾಂತ ವಿಭಾಗಕ್ಕೆ ಸೇರಿ ಎಂಟು ವರ್ಷ ಕಲಿತು ವೇದಾಂತ ಪಾಸ್ ಮಾಡಿದ್ರು, ನಂತರ ಮೈಸೂರು ಮುಕ್ತ ವಿವಿಯಲ್ಲಿ ಎಂಎ ಪರೀಕ್ಷೆ ಪಡೆದು ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದರು. ಬಳಿಕ ಡಾಕ್ಟರೇಟ್ ಪದವಿ ಕನಸು ಕಂಡು, ತನ್ನ ಕನಸನ್ನು ವಿದ್ವಾಂಸ ದಿ. ಡಾ. ಬನ್ನಂಜೆ ಗೋವಿಂದ ಆಚಾರ್ಯ ಬಳಿ ಹಂಚಿಕೊಳ್ಳುತ್ತಾರೆ. ಆಚಾರ್ಯರು ಇವರಿಗೆ ಉತ್ತಮ ಮಾರ್ಗದರ್ಶನ ಮಾಡ್ತಾರೆ.. ಕಟೀಲು ಶ್ರೀ ದುರ್ಗಾ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನೋಂದಣಿ ಮಾಡಿ, ಡಾ. ಪದ್ಮನಾಭ ಮರಾಠೆ ಅವರ ಮಾರ್ಗದರ್ಶನದಲ್ಲಿ ಕ್ರಿಟಿಕಲ್ ಅನಾಲಿಸಸ್ ಆಫ್ ಮಧ್ವಾಚಾರ್ಯಸ್ ಯೂನಿಕ್ ಡಾಕ್ಟ್ರಿನ್ ಆಫ್ ಜೀವ ಸ್ವಾಭಾವ ವಾದ ಆ್ಯಂಡ್ ಸರ್ವ ಶಬ್ದ ವಾಚ್ಯತ್ವ ಎನ್ನುವ ವಿಷಯದ ಬಗ್ಗೆ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿ.ವಿ ಡಾಕ್ಟರೇಟ್ ಪದವಿ ನೀಡಿದೆ...