ಉಡುಪಿ- ನನ್ನ ನಾಯಿಯ ಜೀವಕ್ಕೆ ಅಪಾಯವಿದೆ ಅಂತ ಹೈದರಾಬಾದ್ ಯುವತಿಯಿಂದ ದೂರು
Monday, April 25, 2022
ತನ್ನ ನಾಯಿಯ ಜೀವಕ್ಕೆ ಅಪಾಯವಿದೆ ಎಂದು ಹೈದರಬಾದ್ ನ ಯುವತಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ ಘಟನೆ ನಡೆದಿದೆ.
ಹೈದರಬಾದ್ ನಲ್ಲಿ ಬ್ರೇತ್ ಎನಿಮಲ್ ರೆಸ್ಕ್ ಸೆಂಟರ್ ನಡೆಸುತ್ತಿರುವ ಎಸ್. ಸಾಯಿ ಶ್ರೀ ಎಂಬವರಿಂದ ಉಡುಪಿಯ ರೀನಾ ಎಂಬವರು ಬ್ಲ್ಯಾಕಿ ಮತ್ತು ಕ್ರೀಂ ಎಂಬ ಹೆಸರಿನ ಎರಡು ನಾಯಿಗಳನ್ನು ದತ್ತು ತೆಗೆದುಕೊಂಡಿದ್ದರು. ಸ್ವಲ್ಪ ದಿನಗಳ ನಂತರ ರೀನಾ ಅವರು ಸಾಯಿಶ್ರೀಗೆ ಕರೆ ಮಾಡಿ ಬ್ಲ್ಯಾಕಿ ನಾಯಿ ಕೆಟ್ಟಗುಣಗಳನ್ನು ಹೊಂದಿದ್ದು, ಅದನ್ನು ವಾಪಸ್ಸು ಮಾಡುವುದಾಗಿ ತಿಳಿಸಿದ್ದಾರೆ.
ಆದರೆ ವಾಪಸ್ ಮಾಡದೆ ನಾಯಿಯನ್ನು ಬ್ರಹ್ಮಾವರದ ವ್ಯಕ್ತಿಗೆ
ಕೊಟ್ಟಿದ್ದು, ಅವರು ಇನ್ನೊಬ್ಬ ವ್ಯಕ್ತಿಗೆ ನಾಯಿಯನ್ನು ಕೊಟ್ಟಿದ್ದಾರೆ. ಬ್ಲ್ಯಾಕಿ ನಾಯಿಯನ್ನು ಸುರಕ್ಷತೆ ಇಲ್ಲದ ಜಾಗಕ್ಕೆ ಸ್ಥಳಾಂತರಿಸಿ ಅಪಾಯ ಸ್ಥಿತಿಗೆ ಸಿಲುಕುವಂತೆ ಮಾಡಲಾಗಿದೆ ಎಂದು ಆರೋಪಿಸಿ ಎಸ್. ಸಾಯಿ ಶ್ರೀ ಅವರು ಪ್ರಾಣಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ.