-->

Kerala: ಮುಸ್ಲಿಂ ಲೀಗ್ ಮುಖಂಡನ ಮಗನಿಂದ ಯುವತಿಯರಿಬ್ಬರಿಗೆ ನಡುರಸ್ತೆಯಲ್ಲೆ ಹಲ್ಲೆ

Kerala: ಮುಸ್ಲಿಂ ಲೀಗ್ ಮುಖಂಡನ ಮಗನಿಂದ ಯುವತಿಯರಿಬ್ಬರಿಗೆ ನಡುರಸ್ತೆಯಲ್ಲೆ ಹಲ್ಲೆ

ಮಲಪ್ಪುರಂ: ಅಪಾಯಕಾರಿಯಾಗಿ ತಮ್ಮ ವಾಹನವನ್ನು ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಯುವತಿಯರಿಗೆ ಮುಸ್ಲಿಂ ಲೀಗ್ ಮುಖಂಡನ ಮಗ ಹಲ್ಲೆ ನಡೆಸಿದ ಘಟನೆ ಇಲ್ಲಿನ ಪಣಂಬ್ರಾದಲ್ಲಿ ನಡೆದಿದೆ.
ಅಸ್ನಾ ಕೆ ಅಜೀಜ್​ ಮತ್ತು ಹಮ್ನಾ ಕೆ. ಅಜೀಜ್​ ಎಂಬ ಇಬ್ಬರು ಸಹೋದರಿಯರು ಕೋಯಿಕ್ಕೋಡ್​ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಎಡಗಡೆಯಿಂದ ವೇಗವಾಗಿ ಮುಸ್ಲಿಂ ಲೀಗ್ ಮುಖಂಡನ ಮಗ ಶಬೀರ್ ಎಂಬಾತ ಕಾರು ಓವರ್​ಟೇಕ್​ ಮಾಡಿದ್ದ. ಇದರಿಂದ ಗಾಬರಿಗೊಂಡ ಸಹೋದರಿಯರು ಕಾರು ಚಾಲಕನನ್ನು ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. 

ಇಷ್ಟಕ್ಕೆ ಕುಪಿತಗೊಂಡ ಶಬೀರ್​, ಸಹೋದರಿಯರಿಬ್ಬರಲ್ಲಿ ಸ್ಕೂಟರ್​ ಚಾಲನೆ ಮಾಡುತ್ತಿದ್ದವಳ ಕೆನ್ನಗೆ ಮೊದಲು ಬಾರಿಸಿದ್ದಾನೆ. ಬಳಿಕ ಇಬ್ಬರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಈ ವೇಳೆ ಸ್ಥಳೀಯರು ಒಟ್ಟು ಸೇರಿದಾಗ ಶಬೀರ್ ಕಾರ್‌ನೊಂದಿಗೆ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಯಾರೋ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿದ್ದರೂ ಪೊಲೀಸರು ಮೃದು ಧೋರಣೆ ತಾಳುತ್ತಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99