UDUPI- ಮೂರ್ಖರ ದಿನದಂದು ಮೌನ ಯಾತ್ರೆ
Friday, April 1, 2022
ಉಡುಪಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರಾವಳಿ ಯೂತ್ ಕ್ಲಬ್ ಮತ್ತು ಖ್ಯಾತ ಮನೋವೈದ್ಯ ಡಾಕ್ಟರ್ ಪಿ ವಿ ಭಂಡಾರಿ ನೇತೃತ್ವದಲ್ಲಿ ಮಲ್ಪೆ ಯಿಂದ ಜಿಲ್ಲಾಧಿಕಾರಿ ಕಚೇರಿ ಮಣಿಪಾಲದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.
"ಇವತ್ತುಮೂರ್ಖರ ದಿನಾಚರಣೆ. ನಾವೆಲ್ಲರೂ ಮೂರ್ಖರೇ. ಉಡುಪಿ ಜಿಲ್ಲೆಯಾಗಿ 22 ವರ್ಷ ಕಳೆದರೂ ಕೂಡಾ ನಮ್ಮ ರಾಜಕಾರಣಿಗಳು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಲೇ ಬಂದಿದ್ದಾರೆ. ಇಡೀ ರಾಜ್ಯದಲ್ಲಿ ಡಾಕ್ಟರ್ ವಿಎಸ್ ಆಚಾರ್ಯರು 12 ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿಸಿದ್ದರು ಆದರೆ ಅವರದೇ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡಾ ಮಂಜೂರು ಆಗಿಲ್ಲ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವ ಸೂಚನೆಯನ್ನು ಶಾಸಕರು ನೀಡಿದ್ದಾರೆ ಹೀಗಾದರೆ ಇನ್ನು ಮುಂದೆ ಸರಕಾರವನ್ನು ಕೂಡಾ ಪಿಪಿಪಿ ಮಾದರಿಯಲ್ಲಿ ನಡೆಸೋಣ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜನ್ನು ಮಾಡಿ ೧೦ ವರ್ಷದ ನಂತರ ಮತ್ತೊಮ್ಮೆ ಪತ್ರಿಕಾಗೋಷ್ಟಿ ನಡೆಸಿ ಕಾಲೇಜನ್ನು ನಾವು ಸರಕಾರದ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಘೋಷಣೆ ಮಾಡುವ ಕಾಲ ಬರುತ್ತದೆ. ಖಾಸಗಿಯವರಿಗೆ ವೈದ್ಯಕೀಯ ಕಾಲೇಜು ನೀಡಿದರೆ ಅವರು ಕೇವಲ ವ್ಯವಹಾರವನ್ನು ಮಾತ್ರ ಮಾಡುತ್ತಾರೆ ಅಂತ
ಡಾಕ್ಟರ್ ಪಿ.ವಿ.ಭಂಡಾರಿಯವರು ಹೇಳಿದರು.
ಮಲ್ಪೆ ಗಾಂಧಿ ಪ್ರತಿಮೆಯಿಂದ ಆರಂಭಗೊಂಡ ಪಾದಾಯಾತ್ರೆಯು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಿತು.