ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಪಾಠವನ್ನು ಕಡಿತಗೊಳಿಸುವ ಸರ್ಕಾರದ ನಿಲುವು ಖಂಡನೀಯ ; SDPI
Friday, April 1, 2022
ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವಿಷಯವನ್ನು ಕಡಿತಗೊಳಿಸುವ ಸರ್ಕಾರದ ನಿಲುವು ಖಂಡಿಸಿ ಉಡುಪಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತು.
ಉಡುಪಿ ಅಜ್ಜರಕಾಡು ಹುತಾತ್ಮರ ವೇದಿಕೆ ಬಳಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಕಾರ್ಯಕರ್ತರು, ಮಕ್ಕಳಲ್ಲಿ ವಿಷಬೀಜ ಬಿತ್ತುವ ಸರ್ಕಾರದ ಶೈಕ್ಷಣಿಕ ನೀತಿ, ಅಲ್ಪಸಂಖ್ಯಾತ ವಿರೋಧಿ ನಿಲುವು ಖಂಡನೀಯ. ಸರ್ಕಾರ 40% ಕಮಿಷನ್ ರಾಜ್ಯವನ್ನ ಲೂಟಿ ಮಾಡುತ್ತಿದೆ.
ನಾಗ್ಪುರದ ಎಜ್ಯುಕೇಶನ್ ಪಾಲಿಸಿ ಮೂಲಕ ಬಿಜೆಪಿ ಸರ್ಕಾರ ಕ್ಯಾಂಪಸ್ ಗಳಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಬುರ್ಕಾ ಧಾರಿ ಮಹಿಳೆಯರು ಸಹಿತ ಎಸ್ ಡಿಪಿಐ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರಕ್ಕೆ ಧಿಕ್ಕಾರ ಕೂಗಿದರು..