SALIGRAMA ಹೆಸರಿನ ಪುಟ್ ವೇರ್ ಅಂಗಡಿಯ ಹೆಸರು ಬದಲಿಸುವಂತೆ ಆಗ್ರಹ
Friday, April 1, 2022
ಉಡುಪಿಯ ಸಾಲಿಗ್ರಾಮದ ಮುಖ್ಯಪೇಟೆಯಲ್ಲಿ ಸಾಲಿಗ್ರಾಮ ಪುಟ್ ವೇರ್ ಹೆಸರಿನ ಚಪ್ಪಲಿ ಅಂಗಡಿಯ ಹೆಸರು ಬದಲಾಯಿಸುವಂತೆ ಸಾಲಿಗ್ರಾಮ ಪಟ್ಟಣಪಂಚಾಯತ್‌ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿದೆ.
ಸಾಲಿಗ್ರಾಮ ಎನ್ನುವ ಕ್ಷೇತ್ರ ಪಾವಿತ್ರತೆ ಹೊಂದಿದ ಕ್ಷೇತ್ರವಾಗಿದೆ ಇದರ ಹೆಸರನ್ನು ಇಟ್ಟುಕೊಂಡು ವ್ಯವಹರಿಸುವ ಜೊತೆಗೆ ಹಿಜಾಬ್ ಸಂಬಂಧಿಸಿದ ಕೋಟ್೯ ತೀರ್ಪು ಉಲ್ಲಂಗಿಸಿ ಬಂದ್ ಮಾಡಿದ್ದಾರೆ. ಹಾಗಾದರೆ ಅಂತಹ ಸಮುದಾಯಕ್ಕೆ ನಮ್ಮ ಪವಿತ್ರ ಕ್ಷೇತ್ರ ಅದರಲ್ಲೂ ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸೆಗುತ್ತಿದ್ದಾರೆ ಇಂತಹ ವ್ಯಕ್ತಿಯ ವ್ಯಾವಹಾರಿಕಾ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯತ್ ಮನವಿ ನೀಡಿದ್ದೇವೆ ಅಂತ ಹಿ.ಜಾ.ವೇ ಜಿಲ್ಲಾ ಮುಖಂಡ ಶಂಕರ್ ಕೋಟ ಹೇಳಿದರು....