
UDUPI -ಬಸ್ ನಿರ್ವಾಹಕರ ಬೀದಿ ಕಾಳಗ ; ಪ್ರಯಾಣಿಕರಿಗೆ ಪುಕ್ಕಟೆ ಮನರಂಜನೆ ( VIDEO)
ಕರಾವಳಿ ಖಾಸಗಿ ಬಸ್ ನಿರ್ವಾಹಕ ನಡುವೆ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆಯೋದು ಕಾಮನ್. ಆದ್ರೆ ಇದೇ ಮಾತಿನ ಗಲಾಟೆ ಜೋರಾಗಿ ಬೀದಿ ಕಾಳಗವಾದ ನೆರೆದಿದ್ದವರಿಗೆ ಪುಕ್ಕಟೆ ಮನರಂಜನೆ ಸಿಕ್ಕಿದೆ.
ಉಡುಪಿ ಸಿಟಿ ಬಸ್ ನಿಲ್ದಾಣ ದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಬಸ್ಸಿನ ನಿರ್ವಾಹಕರ ಮಧ್ಯೆ ಬೀದಿ ಕಾಳಗ ನಡೆದಿದ್ದು, ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್ಸುಗಳ ಕಂಡೆಕ್ಟರ್ ಗಳು ಟೈಮಿಂಗ್ಸ್ ವಿಚಾರದಲ್ಲಿ ಜಗಳ ಶುರು ಮಾಡಿ ಬಳಿಕ ಪ್ರಯಾಣಿಕರ ಎದುರೇ ಬೀದಿ ಜಗಳ ಮಾಡಿದ್ದಾರೆ.
ಈ ವೇಳೆ ಪ್ರಯಾಣಿಕರೊಬ್ಬರು ತೆಗೆದ ವಿಡಿಯೋ ಇದೀಗ ವೈರಲ್ ಅಗಿದೆ. ಸಾರ್ವಜನಿಕ ಶಾಂತಿ ಭಂಗ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಖುವಂತೆ ಅಗ್ರಹ ವ್ಯಕ್ತವಾಗಿದೆ.