UDUPI - ಈಗ ಮಂತ್ರಿ ಸ್ಥಾನ ಕೊಟ್ಟರೆ ನನಗೆ ಬೇಡ: Bjp ಶಾಸಕ ರಘುಪತಿ ಭಟ್ ! (Video)
Wednesday, April 6, 2022
ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಬಾರಿ ನನಗೆ ಮಂತ್ರಿಗಿರಿ ಕೊಟ್ಟರೂ ಬೇಡ ,ಆದರೆ ಮುಂದಿನ ಸಲ ನೋಡೋಣ ಅಂತ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು,
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶಾಸಕರು ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಲು ದೆಹಲಿಗೆ ದೌಡಾಯಿಸಿದ್ದಾರಲ್ವ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ,ನಾನಂತೂ ಈಗ ಲಾಬಿ ಮಾಡುವುದಿಲ್ಲ.ಈಗ ಕೊಟ್ಟರೂ ಬೇಡ.ಯಾಕೆಂದರೆ ಇನ್ನೊಂದು ವರ್ಷದಲ್ಲಿ ಎಲೆಕ್ಷನ್ ಬರುತ್ತದೆ.ಹಿಂದೆ ಯಡಿಯೂರಪ್ಪ ಸಿಎಂ ಆದಾಗ ,ಬೊಮ್ಮಾಯಿ ಸಿಎಂ ಆಗುವ ಸಂದರ್ಭದಲ್ಲೂ ನಾನು ಮಂತ್ರಿ ಸ್ಥಾನಕ್ಕೆ ಪ್ರಯತ್ನಪಟ್ಟಿಲ್ಲ. ಮುಂದಿನ ಅವಧಿಗೆ ನೋಡೋಣ ಅಂತ ಹೇಳುವ ಮೂಲಕ ಮುಂದಿನ ಬಾರಿ ನಾನು ಕೂಡ ಆಕಾಂಕ್ಷಿ ಅಂತ ಪರೋಕ್ಷವಾಗಿ ಹೇಳಿದ್ದಾರೆ..