Uppinangadi: ಬೆಂಗಳೂರಿಗೆ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರನ್ನು ತಡೆದ ಹಿಂದುತ್ವವಾದಿಗಳು
Wednesday, April 6, 2022
ಉಪ್ಪಿನಂಗಡಿ: ಭಿನ್ನಮತೀಯ ಜೋಡಿಗೆ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ವಿಚಾರವಾಗಿ ಆಕ್ರೋಶಗೊಂಡಿದ್ದ ಹಿಂದೂಪರ ಸಂಘಟನೆಯ ಸದಸ್ಯರು ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರಿಗೆ ಮುತ್ತಿಗೆ ಹಾಕಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂಜೀವ ಮಠಂದೂರು ಅವರಿದ್ದ ಬಸ್ಸನ್ನು ಉಪ್ಪಿನಂಗಡಿಯಲ್ಲಿ ಹಿಂದೂಪರ ಕಾರ್ಯಕರ್ತರು ತಡೆದಿದ್ದಾರೆ. ಸಂಜೀವ ಮಠಂದೂರಿಗೆ ಮುತ್ತಿಗೆ ಹಾಕಿದ ಕಾರ್ಯರ್ತರು ಬಂಧನ ಮಾಡಿದ್ದು ಎಷ್ಟು ಸರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.