
UDUPI- ಮುತಾಲಿಕ್‌ಗೆ ನಿರ್ಬಂಧಕ್ಕೆ ಬೇಸರಗೊಂಡು ಕೊರಗಜ್ಜನ ಮೊರೆ ( VIDEO)
ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಗಂಗೊಳ್ಳಿ ವೀರೇಶ್ವರ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ ಕಾರ್ಯಕ್ರಮಕ್ಕೆ ಬರುದಕ್ಕೆ ಅಡ್ಡಿಸಿದವರ ವಿರುದ್ಧ ಗಂಗೊಳ್ಳಿಯ ಹಿಂದೂ ಸಂಘಟನೆ ಕಾರ್ಯಕರ್ತರು ಕೊರಗಜ್ಜನ ಮೊರೆಹೋಗಿ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗಂಗೊಳ್ಳಿ ಜಾಗೃತ ಹಿಂದು ಕಾರ್ಯಕರ್ತರು, ಗಂಗೊಳ್ಳಿ ವೀರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ 7 ಕಿ.ಮೀ ಪಾದಯಾತ್ರೆ ಮೂಲಕ ಸಾಗಿ ಮುಳ್ಳಿಕಟ್ಟೆ ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಮೋದ್ ಮುತಾಲಿಕ್ ಭಾಗವಹಿಬೇಕಾಗಿದ್ದ ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದ್ದರು. ಕೆಲವು ಕಾಣದ ರಾಜಕೀಯ ವ್ಯವಸ್ಥೆಗಳಿಂದ ಕೊನೆ ಕ್ಷಣದಲ್ಲಿ ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲೆಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಕಾರ್ಯಕ್ರಮ ಅಸ್ತವ್ಯಸ್ತ ಆಗುವಂತೆ ಮಾಡಿದ ಕಾಣದ ಕೈಗಳ ವಿರುದ್ಧ ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
.