
UDUPI- ಟೀಪಾಯಿ ಮೇಲಿಟ್ಟ ಚಿನ್ನ ಕಿಟಕಿ ಮೂಲಕ ಕಳವು- ಆರೋಪಿ ಇವನೆ!
ಮನೆಯೊಂದರ ಹಾಲ್ ನ ಟಿಪಾಯಿ ಮೇಲೆ ಇಟ್ಟಿದ್ದ ಚಿನ್ನವನ್ನು ಕಿಟಕಿ ಮೂಲಕ ಕಳವು ಮಾಡಿಕೊಂಡು ಹೋಗಿದ್ದ ಯುವಕನನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಂದ್ರಾಳಿ ಮಂಚಿಕೆರೆ ನಿವಾಸಿ ಗುರುರಾಜ್ ನಾಯ್ಕ್ (35) ಬಂಧಿತ ಆರೋಪಿ. ಮಾರ್ಚ್ 26 ರಂದು ಗುಂಡಿಬೈಲು ಪಾಡಿಗಾರ ನಿವಾಸಿ ಸುನೀತಾ ಅವರು ಮನೆಯ ಹಾಲ್‌ನ ಟಿಪಾಯಿ ಮೇಲೆ ಇಟ್ಟಿದ್ದ 6½ ಪವನ್ ತೂಕದ ಚಿನ್ನದ ತೆಂಡೂಲ್ಕರ್ ಚೈನ್ ಮತ್ತು ನೀಲಿ ಹರಳಿನ ಲೋಕೆಟ್ ಇರುವ 3½ ಪವನ್ ತೂಕದ ಚಿನ್ನದ ಚೈನ್ ನ್ನು ಮನೆಯ ಕಿಟಕಿಯ ಮೂಲಕ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಒಟ್ಟು ಅಂದಾಜು ಮೌಲ್ಯ ರೂ. 3,60,000/- ಆಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಪ್ರಸಾದ್‌ಕುಮಾರ್ ಕೆ. ಪೊಲೀಸ್ ಉಪ ನಿರೀಕ್ಷಕರು ತನಿಖೆ-1, ಹಾಗೂ ಸಿಬ್ಬಂದಿಯವರು ಆರೋಪಿಯನ್ನು, ಕಳವಾಗಿದ್ದ ಚಿನ್ನದ ಚೈನ್ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕದ್ದ ಸ್ಕೂಟರ್ ನ ಸಮೇತ ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು ದಸ್ತಗಿರಿ ನಿಯಮ ಪಾಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.