
UDUPI- ಕೃತಕ ಕಾಲು ಸಿಕ್ಕ ಖುಷಿ- ಮಕ್ಕಳಂತೆ ಡ್ಯಾನ್ಸ್ ಮಾಡಿದ ವಿಡಿಯೋ VIRAL
ಕೃತಕ ಕಾಲು ಜೋಡನೆ ಮಾಡಿಕೊಂಡ ವ್ಯಕ್ತಿಯೊಬ್ಬರು ಸಂಭ್ರಮದಿಂದ ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೋಟರಿ ಕ್ಲಬ್ ಮಣಿಪಾಲ, ಪೇಜಾವರ ಅಧೋಕ್ಷಜ ಮಠ ಹಾಗೂ ಭಗವಾನ್ ಮಹಾವೀರ ವಿಕಲಾಂಗ ಸಹಾಯತಾ ಸಮಿತಿ ಸಹಯೋಗದಲ್ಲಿ ಉಚಿತ ಜೈಪುರ ಕೃತಕ ಕಾಲು ಜೋಡಣಾ ಶಿಬಿರ ನಡೆದಿತ್ತು.
ನಾಲ್ಕು ದಿನ ಸುಮಾರು 300ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.ಈ ಶಿಬಿರದಲ್ಲಿ ಎರಡೂ ಕೃತಕ ಕಾಲು ಪಡೆದ ವ್ಯಕ್ತಿಯೊಬ್ಬರು ಸಂತಸದಿಂದ ಸಂಭ್ರಮಿಸಿದ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ.ಈ ವಯೋವೃದ್ಧರ ಜೊತೆ ಶಿಬಿರದ ಆಯೋಜಕರೂ ಸೇರಿ ಕುಣಿದು ಸಂಭ್ರಮಪಟ್ಟರು. ಸದ್ಯ ಈ ಕೃತಕ ಕಾಲು ಪಡೆದ ವ್ಯಕ್ತಿ ಸಂಭ್ರಮದಿಂದ ಕುಣಿಯುವ ವಿಡಿಯೋ ವೈರಲ್ ಆಗಿದ್ದು ಜನರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.