-->
ads hereindex.jpg
UDUPI -ನಾಳೆ ಮತ್ತೆ ಡ್ರಾಮಾ ಮಾಡಿದರೆ  ಕ್ರಿಮಿನಲ್ ಕೇಸ್ ; BJP ಶಾಸಕ ರಘುಪತಿ ಭಟ್ ( VIDEO)

UDUPI -ನಾಳೆ ಮತ್ತೆ ಡ್ರಾಮಾ ಮಾಡಿದರೆ ಕ್ರಿಮಿನಲ್ ಕೇಸ್ ; BJP ಶಾಸಕ ರಘುಪತಿ ಭಟ್ ( VIDEO)ಹಿಬಾಜ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಅಂತ ಪರೀಕ್ಷೆ ಬಹಿಷ್ಕಾರ ಮಾಡಿ ಹೊರ ಪರೀಕ್ಷಾ ಕೇಂದ್ರದಿಂದ ಹೊರ ನಡೆದ  ವಿದ್ಯಾರ್ಥಿನಿಯರ ಈ  ನಡೆಗೆ ಶಾಸಕ ರಘಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದೇ ಇವರ ಉದ್ದೇಶ. ಈ ವಿದ್ಯಾರ್ಥಿನಿಯರು ಹೈಕೋರ್ಟ್ ಗಿಂತ ಮೇಲಾ?. ನಾಳೆ ಮತ್ತೆ ಡ್ರಾಮಾ ಮಾಡಿದರೆ ಸಹಿಸುವುದಿಲ್ಲ ನಾಳೆ ಬಂದು ಡ್ರಾಮಾ ಮಾಡಿದ್ರೆ ಕ್ರಿಮಿನಲ್ ಕೇಸ್ ಮಾಡುತ್ತೇವೆ ಎಚ್ಚರಿಕೆ ನೀಡಿದ್ದಾರೆ.

 ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವುಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಿಗ್ಗೆ ಒಂಬತ್ತು ಮೂವತ್ತಕ್ಕೆ ಕಾಲೇಜಿಗೆ ಬಂದರು. ಹಿಜಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರು. ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡದುಕೊಂಡು ಹೋಗಿದ್ದಾರೆ.ನಂತರ ಎಕ್ಸಾಮ್ ಸೆಂಟರ್ ಗೆ ಹೋಗಿ  ಡ್ರಾಮಾ ಮಾಡಿದ್ದಾರೆ
ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ ಅಂತ ಎಚ್ಚರಿಕೆ ನೀಡಿದ್ದಾರೆ..

Ads on article

Advertise in articles 1

advertising articles 2