UDUPI :ಹಿಜಾಬ್ ಮುಖ್ಯ- ಪರೀಕ್ಷೆ ಬರೆಯದೆ ಹೊರನಡೆದ ವಿದ್ಯಾರ್ಥಿ ನಿಯರು
Friday, April 22, 2022
ಆರಂಭದಲ್ಲಿ ಹಿಜಾಬ್ ಕಿಡಿ ಹೊತ್ತಿಸಿದ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಮುಖ್ಯ ಎಂದು ಪರೀಕ್ಷೆ ಬರೆಯದೆ ಹೊರನಡೆದಿದ್ದಾರೆ.
ಆರು ಮಂದಿ ವಿದ್ಯಾರ್ಥಿನಿಯರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಈಗಾಗಲೇ ಪ್ರಥಮ ಪಿಯುಸಿ ಪರೀಕ್ಷೆ ಬರೆದಿಲ್ಲ. ನಾಲ್ವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿರಾದ, ಆಲಿಯಾ ಅಸಾದಿ ಹಾಗೂ ರೇಶಂಗೆ ಇವತ್ತು ಪರೀಕ್ಷೆ ಇತ್ತು. ಇಬ್ಬರು ವಿದ್ಯಾರ್ಥಿನಿಯರು ಬೆಳ್ಳಗೆ ಸರ್ಕಾರಿ ಪಿಯು ಕಾಲೇಜು ಉಡುಪಿಗೆ ಬಂದು, ಪರೀಕ್ಷಾ ಹಾಲ್ ಟಿಕೆಟ್ ಪಡೆದುಕೊಂಡರು.
ಆದರೆ ಪರೀಕ್ಷಾ ಕೇಂದ್ರವಾದ ಉಡುಪಿಯ ವಿದ್ಯೋದಯ ಕಾಲೇಜ್‌ಗೆ ಬಂದು, ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆಗೆ ಅವಕಾಶ ನೀಡಿ ಅಂತ ಪಟ್ಟು ಹಿಡಿದಿದ್ದಾರೆ. ಪರೀಕ್ಷಾ ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡಿದರೂ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ ಅಂತ ಖಡಕ್ ಆಗಿ ಹೇಳಿದಾಗ ನಮಗೆ ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಅಂತ ಹೊರ ನಡೆದಿದ್ದಾರೆ..