Rules Follow ಮಾಡುವವರಲ್ಲ ಈ 5 ರಾಶಿಯವರು..!!
Thursday, April 21, 2022
ಮೇಷ ರಾಶಿ
ಮೇಷ ರಾಶಿಯವರು ತಮ್ಮ ಹಠಾತ್ ಪ್ರವೃತ್ತಿಗೆ ಹೆಸರುವಾಸಿಯಾಗಿದ್ದಾರೆ. ತಾವೇನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಯಾರಾದರೂ ಹೇಳುವುದನ್ನು ಅವರು ಇಷ್ಟಪಡುವುದಿಲ್ಲ. ಇವರದು ಅಗ್ನಿಯ ತತ್ವ. ಹಾಗಾಗಿ ಯಾವಾಗಲೂ ತಾವು ಇಷ್ಟಪಡುವುದಕ್ಕಾಗಿ ಹೋರಾಡಲು ಸಿದ್ಧವಾಗಿರುತ್ತಾರೆ. ವಿಶೇಷವಾಗಿ ಅವರ ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡುತ್ತಾರೆ. ಮೇಷ ರಾಶಿಯವರು ತಮ್ಮ ಹೃದಯದ ಮಾತನ್ನು ಮಾತ್ರ ಅನುಸರಿಸಲು ಇಷ್ಟಪಡುತ್ತಾರೆ. ಹಾಗಂಥ ಇದಕ್ಕಾಗಿ ಅವರು ಆಕ್ರಮಣಕಾರಿ ಅಥವಾ ಕೆಟ್ಟವರಾಗುವ ಬದಲು ನಿಯಮಗಳನ್ನು ನಯವಾಗಿ ಕಡೆಗಣಿಸುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ ಮತ್ತು ನಿಯಮಗಳು ಅವರನ್ನು ಎಂದಿಗೂ ಮಿತಿಯಲ್ಲಿ ಇಡಲು ಸಫಲವಾಗುವುದಿಲ್ಲ. ಅವರು ಗುಂಪನ್ನು ಹಿಂಬಾಲಿಸುವ ಬದಲು ತಮ್ಮದೇ ಆದ ದಾರಿ ಮಾಡಿಕೊಳ್ಳಲು ಬಯಸುತ್ತಾರೆ. ಅವರು ಹಠಾತ್ ಪ್ರವೃತ್ತಿಯಲ್ಲಿ ಬೆಳೆಯುತ್ತಾರೆ, ಆದ್ದರಿಂದ ಅವರು ಆಗಾಗ್ಗೆ ನಿಯಮಗಳನ್ನು ಮುರಿಯುತ್ತಾರೆ. ಮೇಷ ರಾಶಿಯವರು ಐ ಡೋಂಟ್ ಕೇರ್ ಎಂಬ ಮನೋಭಾವದಿಂದ ತಿರುಗಾಡುತ್ತಾರೆ.
ಧನು ರಾಶಿ
ಜನರು ತಾವೇನು ಮಾಡಬೇಕೆಂದು ಬಯಸುತ್ತಾರೆ, ತಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬ ಬಗ್ಗೆ ಕೇರ್ ಮಾಡುವವರಲ್ಲ ಧನು ರಾಶಿಯವರು. ಸಾಹಸ ಹಾಗೂ ಸ್ವಾತಂತ್ರ್ಯ ಪ್ರಿಯರಾದ ಇವರು, ನಿಯಮಗಳನ್ನು ಮುರಿಯುವುದರಲ್ಲೂ ಸಾಹಸದ ರುಚಿ ನೋಡುತ್ತಾರೆ. ಹಠಾತ್ ನಿರ್ಧಾರಗಳೊಂದಿಗೆ ರೋಮಾಂಚಕ ಜೀವನವನ್ನು ಇಷ್ಟಪಡುತ್ತಾರೆ. ಏನನ್ನಾದರೂ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರ ಇವರಲ್ಲ. ಬದಲಿಗೆ, ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಹಾಗಂಥ ಕೆಟ್ಟವರೇನಲ್ಲ. ಸತ್ಯಕ್ಕಾಗಿ ಹಂಬಲಿಸುವ ಇವರು, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮನ್ನು ತಾವು ನಿಯಮಬಾಹಿರರಾಗಿ ಇಟ್ಟುಕೊಳ್ಳುತ್ತಾರೆ. ಅಂತರ್ಮುಖಿಗಳಾಗಿದ್ದರೂ ಅವರು ಕ್ರಾಂತಿಕಾರಿ ಕ್ರಮಗಳು ಮತ್ತು ಆಲೋಚನೆಗಳನ್ನು ತರಲು ವಿಶೇಷವಾಗಿ ಯೋಚಿಸಬಲ್ಲರು. ಆ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಬಲ್ಲರು. ಕಾನೂನು ವಿಷಯಗಳನ್ನು ನಿರ್ವಹಿಸುವಲ್ಲಿ ಇವರು ಉತ್ತಮವಾಗಿಲ್ಲದಿರಬಹುದು, ಆದರೆ ಪ್ರಾಮಾಣಿಕತೆಯಂತೂ ಇವರಲ್ಲಿದೆ. ಈಗಾಗಲೇ ಮಾಡಿರುವ ನಿಯಮಗಳಲ್ಲಿ, ಸಂಪ್ರದಾಯಗಳಲ್ಲಿ ಸಾಕಷ್ಟು ಕುಂದುಕೊರತೆಗಳಿದ್ದು ಅವನ್ನು ಮರುಪರಿಶೀಲಿಸಬೇಕಾಗಿದೆ ಎಂಬುದು ಇವರ ನಿಲುವು.
ಮೀನ ರಾಶಿ
ಮೀನ ರಾಶಿಯವರ 6ನೇ ಇಂದ್ರಿಯ ಜಾಗೃತವಾಗಿರುತ್ತದೆ. ಆದ್ದರಿಂದ ಅವರು ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೂ ಮುಲಾಜಿಲ್ಲದೆ ಮಾಡುತ್ತಾರೆ. ಅವರು ತಮ್ಮ ಕ್ರಿಯೆಗಳ ನಂತರದ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ. ಜೀವನ ಹೆಂಗೆ ಬರುತ್ತೋ ಹಾಗೆ ತೆಗೆದುಕೊಂಡು ಹೋಗಲು ಬಯಸುತ್ತಾರೆ. ನಿಯಮಗಳು ಇವರ ಸೃಜನಶೀಲತೆ ಮತ್ತು ಕಲ್ಪನೆಗಳಿಗೆ ಮಿತಿ ಹೇರುವುದರಿಂದ ಇವರು ನಿಯಮಗಳನ್ನು ಮುರಿಯಲು ಇಷ್ಟಪಡುತ್ತಾರೆ.