Public toiletನಲ್ಲೇ ಅಪ್ರಾಪ್ತೆಯ ಅತ್ಯಾಚಾರ
Saturday, April 16, 2022
ಪುಣೆ: 12 ವರ್ಷದ ಹುಡುಗಿಯ ಮೇಲೆ ಸಾರ್ವಜನಿಕ ಶೌಚಾಲಯದಲ್ಲೇ ಅತ್ಯಾಚಾರ ಎಸಗಿರುವ ಘಟನೆ ಪುಣೆಯ ರೈಲ್ವೇ ನಿಲ್ದಾಣದ ಬಳಿಯಿರುವ ಬಂಡ್ ಗಾರ್ಡನ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಬಾಲಕಿಯ ಇಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ವೇಳೆ ಹಿಂಬಾಲಿಸಿದ ಆರೋಪಿ ಆಕೆಯನ್ನು ಅಲ್ಲೇ ಬೀಳಿಸಿ ಅತ್ಯಾಚಾರ ಮಾಡಿದ್ದಾನೆ.
ಆರೋಪಿ ಹೋಗುತ್ತಿದ್ದ ವೇಳೆ ಹುಡುಗಿಯ ಚಿಕ್ಕಪ್ಪ ನೋಡಿದ್ದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ತಾಯಿ ನೀಡುದ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ತಡೆ ಕಾಯ್ದೆ-2012ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.