ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನನ್ನದು ಒಂದೇ ಹಿಂದುತ್ವ- ಆದರೆ ನನ್ನನ್ನು ಬ್ಯಾನ್ ಮಾಡ್ತಾರೆ; ಪ್ರಮೋದ್ ಮುತಾಲಿಕ್ ( VIDEO)
Saturday, April 16, 2022
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ಉಡುಪಿಯ ಪ್ರವೇಶ ನಿರ್ಬಂಧ ಮಾಡಿರುದನ್ನು ಮುತಾಲಿಕ್ ಖಂಡಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಈ ಕುರಿತು
ಮಾಧ್ಯಮಗಳ ಜೊತೆಗೆ ಮಾತಾನಾಡಿದ ಅವರು, ನನ್ನನ್ನು ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ನಿಷೇದಿಸಲಾಗಿದೆ. ಈ ನಡೆಯಿಂದ ಬಿಜೆಪಿಗೆ ಮುಂದೆ ತೊಂದರೆ ಆಗುತ್ತದೆ. ಕಲ್ಲಂಗಡಿ ಹಣ್ಣು ಒಡೆದವರ ಮೇಲೆ 6 ಸೆಕ್ಷನ್ ಹಾಕಲಾಗಿದೆ. ನೀವು ತಿದ್ದುಕೊಳ್ಳದೆ ಹೋದರೆ ನಿಮಗೆ ಅನಾಹುತ ಆಗುತ್ತೆ ಎಂದಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನನ್ನದು ಒಂದೇ ರೀತಿಯ ಹಿಂದುತ್ವ. ಆದರೆ ನನ್ನನ್ನು ಬ್ಯಾನ್ ಮಾಡ್ತಾರೆ. ಅವರನ್ನು ಸಪೋರ್ಟ್ ಮಾಡ್ತಾರೆ. ತೊಗಡಿಯಾ ಅವರನ್ನು ನಿಷೇಧಿಸಿದಾಗ ಈಶ್ವರಪ್ಪ ಸದನದಲ್ಲಿ ಪ್ರಶ್ನಿಸಿದ್ದರು. ಈಗ ಅದೇ ಸರಕಾರ ನನ್ನನ್ನು ನಿಷೇಧಿಸಿದೆ ಎಂದರು.
ಗಂಗೊಳ್ಳಿ ಇಡೀ ರಾಜ್ಯಕ್ಕೆ ಜಾಗೃತಿಯ ಸಂದೇಶ ಕೊಟ್ಟ ಪ್ರದೇಶ ಇಲ್ಲಿ ಮೀನುಗಾರರಿಗೆ ನಿಷೇಧ ಹೇರಿದ ಕಾರಣ ರಾಜ್ಯಾದ್ಯಂತ ವ್ಯಾಪಾರ ಅಸಹಕಾರ ಚಳುವಳಿ ಆರಂಭವಾಯಿತು . ಮುಸ್ಲಿಂ ಬಾಹುಳ್ಯ ಊರುಗಳು ಸೂಕ್ಷ್ಮ ಪ್ರದೇಶ ಆಗುತ್ತೆ. ಇದು ಸಮಾಜಕ್ಕೆ ದೊಡ್ಡ ಗಂಡಾತರ ತಂದಿಡಲಿದೆ. ಸರಕಾರ ಆ ಗಲಭೆಕೋರರ ಮನೋಬಲ ಹೆಚ್ಚಿಸುತ್ತಿದೆ. ಹಿಜಬ್ ವಿವಾದ ಬಳಿಕ ಹಿಂದು ಸಮಾಜ ಜಾಗೃತಿಗೊಂಡಿದೆ. ಬಿಜೆಪಿ ಹೀಗೆ ಹಿಂದು ನಾಯಕರನ್ನು ದಮನಿಸಲು ನೋಡಿದರೆ ತಕ್ಕ ಉತ್ತರ ಸಮಾಜ ನೀಡುತ್ತೆ ಅಂತ ಮುತಾಲಿಕ್ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ..