
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಗೆ ಜ್ಯೂಸ್ ನಲ್ಲಿ ಬಳಸಿದ್ದ ಕೀಟನಾಶಕ ಪತ್ತೆ
ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಸೇವಿಸಿ
ಉಡುಪಿಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷ ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಅಂತ ಸರಕಾರದಿಂದ ನಿಷೇಧಕ್ಕೆ ಒಳಗಾಗಿತ್ತು.
ಆದರೆ ಇಂತಹ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರೆ ಬೇಗನೆ ಸಾವನ್ಪತ್ತಾರೆ ಅಂತ ತಿಳಿದು ಸಂತೋಷ್ ಈ ಕೀಟನಾಶಕವನ್ನು ಚಿಕ್ಕಮಗಳೂರಿನಿಂದ ಖರೀದಿ ಮಾಡಿ ಬ್ಯಾಗ್‌ನಲ್ಲಿ ಯಾರಿಗೂ ಗೊತ್ತಾಗದಂತೆ ಇಟ್ಟುಕೊಂಡು ಬಳಿಕ ರೂಮ್‌ನಲ್ಲಿ ಜ್ಯೂಸ್‌ನಲ್ಲಿ ಮಿಕ್ಸ್ ಮಾಡಿ ಸೇವನೆ ಮಾಡಿದ್ರು ಅಂತ ಪೊಲೀಸರ ಮಾಹಿತಿಯಿಂದ ತಿಳಿದು ಬಂದಿದೆ..