ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ADGP ಪ್ರತಾಪರೆಡ್ಡಿ ಎಂಟ್ರಿ ( Video)
Saturday, April 16, 2022
ಬೆಳಗಾವಿ ಮೂಲದ ಗುತ್ತಿಗೆದಾದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಪ್ರಕರಣದ ತನಿಖೆಗೆ ಎಡಿಜಿಪಿ ಪ್ರತಾಪರೆಡ್ಡಿ
ಎಂಟ್ರಿ ಕೊಟ್ಟಿದ್ದಾರೆ.
ರಾಜ್ಯದ ಅತ್ಯಂತ ಚಾಣಾಕ್ಷ ಅಧಿಕಾರಿ ಎಂದು ಪ್ರಸಿದ್ಧಿ ಪಡೆದಿರುವ ಪ್ರತಾಪ್ ರೆಡ್ಡಿ ಅನೇಕ ಜಟಿಲ ಪ್ರಕರಣಗಳನ್ನು ಭೇದಿಸಿ ಹೆಸರುವಾಸಿಯಾಗಿದ್ದಾರೆ. ನಿಖರ ತನಿಖೆ ನಡೆಸಿ ಕೇಸ್ ಬಿಲ್ಡಪ್ ಮಾಡುವುದರಲ್ಲಿ ಎತ್ತಿದ ಕೈಯಾದ ಪ್ರತಾಪ್ ರೆಡ್ಡಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸತತ ನಾಲ್ಕು ಗಂಟೆಗಳಿಂದ ಸತತ ಚರ್ಚೆ ನಡೆಸಿದ್ದಾರೆ..
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಲು ಬಂದಿದ್ದೇನೆ
ಏಳು ತನಿಖಾ ತಂಡಗಳನ್ನು ಮಾಡಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ ತನಿಖೆಯನ್ನು ಸಮರ್ಪಕವಾಗಿ ರೀತಿಯಲ್ಲಿ ಮಾಡಲಾಗುವುದು. ಎಡಿಜಿಪಿ ಆಗಿ ನಾನು ತನಿಖಾ ಅಧಿಕಾರಿಗಳನ್ನು ಮತ್ತು ತಂಡಗಳನ್ನು ಮೇಲುಸ್ತುವಾರಿ ಮಾಡುತ್ತೇನೆ ನನ್ನ ನಿರ್ದೇಶನದಂತೆ ತನಿಖಾ ತಂಡಗಳು ಕೆಲಸ ನಡೆಯಲಿದೆ ಅಂತ ಹೇಳಿದ್ದಾರೆ. ಇನ್ನೂ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು. ಪ್ರತಿಯೊಂದು ಆಯಾಮಗಳನ್ನು ಕೂಡ ನಾವು ಪರಿಶೀಲನೆ ಮಾಡಬೇಕಾಗುತ್ತದೆ. ಸಮರ್ಪಕವಾಗಿ ತನಿಖೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಡುತ್ತೇನೆ. ತನಿಖೆ ಪ್ರಗತಿ ನೋಡಿಕೊಂಡು ಮಾಧ್ಯಮಗಳಿಗೆ ಮಾಹಿತಿ ಕೊಡುತ್ತೇವೆ ಅಂತ ಉಡುಪಿಯಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿದರು..