ದೇಗುಲ ಪ್ರವೇಶಿಸಿದ ಪರಿಶಿಷ್ಟ ಜಾತಿ ಯ ಮಗು - ಪೋಷಕರಿಗೆ ದಂಡ
ಬೆಂಗಳೂರು: ಆಕಸ್ಮಿಕವಾಗಿ ಪರಿಶಿಷ್ಟ ಜಾತಿ ಯ ಮಗುವೊಂದು ದೇಗುಲ ಪ್ರವೇಶಿಸಿದ್ದು, ಇದಕ್ಕೆ ದಂಡವಾಗಿ ಮಗುವಿನ ಪೋಷಕರಿಗೆ 25 ಸಾವಿರ ರೂ ವಿಧಿಸಲಾಗಿದ್ದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೀಯಾಪುರ ಗ್ರಾಮದಲ್ಲಿ ನಡೆದಿತ್ತು.
ಮಗುವಿನ ಹೆಸರು ವಿನಯ್. ಹಾಗಾಗಿ ಮಗುವಿನ ಹೆಸರಿನಲ್ಲಿ 'ವಿನಯ್ ಜನಜಾಗೃತಿ' ಎಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರತಿ ಗ್ರಾಮ ಮಟ್ಟದಲ್ಲೂ ಅಸ್ಪೃಶ್ಯತೆ ನಿವಾರಣೆಗೆ ಈ ಕಾರ್ಯಕ್ರಮದಡಿ ಜನ ಜಾಗೃತಿ ಮೂಡಿಸಲಾಗುತ್ತೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಘಟನೆ ಹಿನ್ನೆಲೆ:
ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೀಯಾಪುರ ಗ್ರಾಮದ ಪರಿಶಿಷ್ಟ ಜಾತಿಯ ಚನ್ನದಾಸರ ಸಮುದಾಯದ ಚಂದ್ರಶೇಖರ್ ಹಾಗೂ ಲಲಿತಾ ದಾಸರ್ ದಂಪತಿಗಳ ಪುತ್ರ ವಿನಯ್‌ನನ್ನು ಜನ್ಮದಿನದ ಹಿನ್ನಲೆ ಆಂಜನೇಯನ ದೇವಸ್ಥಾನದ ಬಳಿ ಕರೆದೊಯ್ದಿದ್ದರು. ಆದರೆ ಮಗು ಆಕಸ್ಮಿಕವಾಗಿ ಮಗು ದೇವಸ್ಥಾನವನ್ನು ಪ್ರವೇಶಿಸಿತ್ತು. ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಮೈಲಿಗೆಯಾಗಿದ್ದು, ಅಶುದ್ಧಗೊಂಡಿದೆ ಎಂದು ವಿನಯ್‌ನ ಪಾಲಕರಿಗೆ ಗ್ರಾಮಸ್ಥರು 25 ಸಾವಿರ ರೂ. ದಂಡ ನೀಡುವಂತೆ ಒತ್ತಾಯಿಸಿದ್ದರು. ಈ ಅಸ್ಪೃಶ್ಯತೆ ಆಚರಣೆಯೂ ತಡವಾಗಿ ಬೆಳಕಿಗೆ ಬಂದಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು