
ಬೆಲೆ ಏರಿಕೆ: ನವವಿವಾಹಿತರಿಗೆ ಗೆಳೆಯರು ಕೊಟ್ಟ ಉಡುಗೊರೆ ಏನು ನೋಡಿ
ಚೆನ್ನೈ: ಮದುವೆ ಮಂಟಪದಲ್ಲಿ ನವ ವಧು ವರರಿಗೆ ಶುಭ ಕೋರಲು ಬಂದಿದ್ದ ಗೆಳೆಯರ ಗುಂಪೊಂದು ಅವರಿಗೆ ನೀಡಿದ ವಿಶಿಷ್ಟ ಗಿಫ್ಟ್ ಘಟನೆ ತಮಿಳುನಾಡಿನ ಚೆಂಗಲ್ ಪಟ್ಟು ಜಿಲ್ಲೆಯ ಚೆಯ್ಯೂರು ಗ್ರಾಮದಲ್ಲಿ ನಡೆದಿದೆ.
ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ವರನ ಗೆಳೆಯರು, ನವವಿವಾಹಿತರಿಗೆ ವಿಶ್ ಮಾಡಿದ ಬಳಿಕ, ಎರಡು ಬಾಟಲಿ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಗೆಳೆಯರು ಅಣಕ ಮಾಡುವ ಸಲುವಾಗಿ ಈ ರೀತಿ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.