ಸುದ್ದಿಗಳು
ಲೋಡ್ ಆಗುತ್ತಿದೆ...

ನಾನು 13 ವರ್ಷದವಳಿದ್ದಾಗ 'ಅವರು' ನನ್ನನ್ನು ಸಾಮೂಹಿಕ ಅತ್ಯಾಚಾರ ಮಾಡಿದರು ಎಂದು 27 ವರ್ಷದ ಬಳಿಕ ದೂರು ನೀಡಿದ ಮಹಿಳೆ

ಲಕ್ನೋ: 27 ವರ್ಷಗಳ ಮೊದಲು ಅಂದರೆ ನಾನು 13 ವರ್ಷದವಳಿದ್ದಾಗ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತೆಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಮಹಿಳೆ 27 ವರ್ಷಗಳ ಹಿಂದೆ,  13 ವರ್ಷವದ ಬಾಲಕಿಯಾಗಿದ್ದಾಗ ತನ್ನ ಅಕ್ಕನ ಮನೆಗೆ ಹೋಗಿದ್ದಳು. ಅಲ್ಲಿ ಮನೆಯಲ್ಲಿ ಯಾರೂ ಇಲ್ಲದಾಗ ಬಾವನ ಕಾರು ಚಾಲಕ ಮತ್ತು ಆತನ ಸಹೋದರ ತನ್ನ ಮೇಲೆ ಅತ್ಯಾಚಾರವೆಸಗಿದ್ದರು. ಪರಿಣಾಮ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮವಿತ್ತಿದ್ದೆ. ಆ ಮಗುವನ್ನು ಮಕ್ಕಳಿಲ್ಲದ ದಂಪತಿಯೊಬ್ಬರಿಗೆ ನೀಡಿಲಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ಮಹಿಳೆಯ ಮದುವೆಯಾಗಿತ್ತು. ಮದುವೆಯಾಗಿ 10 ವರ್ಷದ ಬಳಿಕ ಗಂಡನಿಗೆ ಈ ವಿಚಾರ ತಿಳಿದಿದ್ದು,  ಹೀಗಾಗಿ ಗಂಡ ಮದುವೆ ಮುರಿದುಕೊಂಡ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಇದೀಗ ಪೊಲೀಸರು ಡಿಎನ್ ಎ ಪರೀಕ್ಷೆ ನಡೆಸಿ ಸಾಕ್ಷ್ಯ ಕಲೆ ಹಾಕಿದ್ದಾರೆ.

ಸುದ್ದಿ ಹಂಚಿಕೊಳ್ಳಿ:
ಇತ್ತೀಚಿನ ಸುದ್ದಿಗಳು
×

WhatsApp Channel

ಬ್ರೇಕಿಂಗ್ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

JOIN NOW