-->
ads hereindex.jpg
ಉಡುಪಿಯಲ್ಲಿ ಜೊತೆಗಾರನನ್ನೆ ಕೊಲೆ ಮಾಡಿದ ಕಾರ್ಮಿಕ

ಉಡುಪಿಯಲ್ಲಿ ಜೊತೆಗಾರನನ್ನೆ ಕೊಲೆ ಮಾಡಿದ ಕಾರ್ಮಿಕ


ಉಡುಪಿಯ ಮಲ್ಪೆಯ ಬಾಪುತೋಟ ಧಕ್ಕೆಯಲ್ಲಿ  ಕ್ಷುಲ್ಲಕ ಕಾರಣಕ್ಕಾಗಿ ಮೀನು ಕಾರ್ಮಿಕನೋರ್ವ ತನ್ನ ಜೊತೆಗಾರನನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

 ಕೊಪ್ಪಲ ಜಿಲ್ಲೆಯ ಕುಕ್ಕುನೂರಿನ ಮಹಾಂತೇಶ್ (35)
ಕೊಲೆಯಾದ ವ್ಯಕ್ತಿ. ಹೊನ್ನಾವರ ತಾಲೂಕಿನ ಬೇಳೆಕೆರೆಯ ನಾಗರಾಜ್ (26) ಕೊಲೆ ಆರೋಪಿ. ಮೀನುಗಾರಿಕೆ ಮುಗಿಸಿ  ಬೋಟನ್ನು ಬಾಪುತೋಟ ಧಕ್ಕೆಯಲ್ಲಿ ಲಂಗರು ಹಾಕಿ, ಬೋಟಿನ ಕಲಾಸಿಗಳಾದ ಬರಮಪ್ಪ ಮತ್ತು ಮಹಾಂತೇಶ ಮಲ್ಪೆಪೇಟೆಗೆ ಹೋಗಿದ್ದರು. 

ಅಲ್ಲಿಂದ ಇವರಿಬ್ಬರು ರಾತ್ರಿ ಸ್ನೇಹಿತ ಶಾಂತಪ್ಪ ಜೊತೆ ಬೋಟಿಗೆ ಬಂದಿದ್ದರು. ಬೋಟಿನಲ್ಲಿ ಇತರ ಕಲಾಸಿಗರಾದ ಉಮೇಶ ಮತ್ತು ನಾಗರಾಜ ಮಲಗಿದ್ದರು. ಮಹಾಂತೇಶ್ ಹಾಗೂ ಇತರರು ಊಟ ಮಾಡುವುದಕ್ಕಾಗಿ ಬೋಟಿನ ಕ್ಯಾಬಿನ್ ಒಳಗಡೆಯ ಲೈಟ್ ಹಾಕಿದರು. ಆಗ ಲೈಟ್ ಆಫ್ ಮಾಡುವಂತೆ ನಾಗರಾಜ ತಿಳಿಸಿದ್ದು ಇದೇ ವಿಚಾರವಾಗಿ ಮಹಾಂತೇಶ ಮತ್ತು ನಾಗರಾಜ ಮಾತಿನ ಚಕಮಕಿ ನಡೆಯಿತು. ಹೀಗೆ ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಮಹಾಂತೇಶ್‌ಗೆ ಹಲ್ಲೆ ಮಾಡಿದ್ದಾನೆ. ನಂತರ ಮಹಾಂತೇಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿ ಆಗದೇ ಮಹಾಂತೇಶ್ ಸಾವನ್ಪಿದ್ದಾನೆ. ಈ  ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2