ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ; ತನಿಖೆಗೆ UDUPI ಪೊಲೀಸರ ವಿಶೇಷ ತಂಡ
Saturday, April 16, 2022
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸೂಕ್ಷ್ಮ ಕೇಸ್ ಆಗಿರೋ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ..
ಉಡುಪಿ ಎಸ್‌ಪಿ ವಿಷ್ಣುವರ್ಧನ್, ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ತನಿಖೆಗಾಗಿ ತಂಡಗಳನ್ನು ರಚಿಸಿದ್ದು, ಉಡುಪಿಯ ಮಣಿಪಾಲ್ ಇನ್ ಸ್ಪೆಕ್ಟರ್ ನೇತೃತ್ವದ ಪೊಲೀಸ್ ತಂಡ
ಚಿಕ್ಕಮಗಳೂರು ಬೆಂಗಳೂರಿಗೆ ತೆರಳುತ್ತಿ ತನಿಖೆ ನಡೆಸುತ್ತಿದೆ. ಉಡುಪಿ ನಗರ ಪೊಲೀಸರು ದಾವಣಗೆರೆಗೆಯಲ್ಲಿ ಹಾಗೂ ಬ್ರಹ್ಮಾವರ ಸರ್ಕಲ್ ಇನ್ ಸ್ಪೆಕ್ಟರ್ ಮತ್ತು ಮಲ್ಪೆ ಇನ್ ಸ್ಟೆಕ್ಷರ್ ನೇತೃತ್ವದ ತಂಡ, ಸಂತೋಷ್ ಪಾಟೀಲ್ ಹುಟ್ಟೂರು ಬೆಳಗಾವಿಗೆ ತೆರಳಿ ತನಿಖೆ ನಡೆಸುತ್ತಿದೆ ಅಂತ ಪೋಲಿಸ್ ಮೂಲಗಳು ತಿಳಿಸಿದೆ. ಇನ್ನೂ ಸಂತೋಫ್ ಪಾಟೀಲ್ ಜೊತೆಗೆ ಉಡುಪಿಯ ಹೋಟೆಲ್‌ನಲ್ಲಿ ತಂಗಿದ್ದ ಇಬ್ಬರು ಸ್ನೇಹಿತರನ್ನು ಪೊಲೀಸರು ಬೆಳಗಾವಿ ಉಡುಪಿಗೆ ಬರುವಾಗ ಹೋದ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸುತ್ತಿದ್ದಾರೆ..
ಅಲ್ಲದೇ ಹೋಟೆಲ್ ಬಟ್ಟೆ ಅಂಗಡಿಯ ಸಿಸಿ ಟಿವಿ ಪೂಟೇಜ್‌ಗಳನ್ನು ಸಂಗ್ರಹಿಸಿಸುತ್ತಿದ್ದಾರೆ.. ಇಬ್ಬರು ಸ್ನೇಹಿತರ ಹೇಳಿಕೆಗಳನ್ನು ವಿಡಿಯೋ ದಾಖಲೆ ಮಾಡುತ್ತಿದ್ದಾರೆ.
ಇನ್ನೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡುವೆಯೇ, ರಾಜೇಶ್ ಎನ್ನುವ ಹೆಸ್ರು ತಳುಕು ಹಾಕಿಕೊಂಡಿದ್ದು, ಸಂತೋಷ್ ಪಾಟೀಲ್ ಸ್ನೇಹಿತರು ರಾಜೇಶ್ ಹೆಸ್ರು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.. ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿಇದ್ದಾಗ ಒಂದೇ ರೂಮ್ ಮಾಡಿದ್ದ ಸಂತೋಷ್ ಪಾಟೀಲ್, ಉಡುಪಿಗೆ ಬಂದಾಗ ಎರಡು ರೂಮ್ ಬುಕ್ ಮಾಡಿದ್ರು, ಇದನ್ನು ಸ್ನೇಹಿತರು ಪ್ರಶ್ನೆ ಮಾಡಿದಾಗ ರಾಜೇಶ್ ಬರುತ್ತಾನೆ ಅಂತ ಹೇಳಿದ್ದರಂತೆ ಗುತ್ತಿಗೆದಾರ ಸಂತೋಷ್ ಪಾಟೀಲ್. ಹೀಗಾಗಿ ಲಾಡ್ಜಿಗೆ ಬರುತ್ತೇನೆಂದು ಹೇಳಿದ್ದ ರಾಜೇಶ್ ಯಾರು? ಯಾಕೆ ಈತ ಸಂತೋಷ್ ಪಾಟೀಲ್‌ನ್ನು ಮೀಟ್ ಆಗಲು ಬರಬೇಕಿತ್ತು. ರಾಜೇಶ್ ಸಂತೋಷ್ ಪಾಟೀಲ್ ಇರುವ ರೂಮ್ಗೆ ಬಂದಿದ್ದಾನಾ..? ಹೀಗೆ ಈ ನಿಟ್ಟಿನಲ್ಲೂ ಪೊಲೀಸರ ತನಿಖೆ ನಡೆಯುತ್ತಿದೆ..