Mumbai ದಾಳಿಯ ರುವಾರಿ ಹಫೀಝ್ ಸಯೀದ್‌ಗೆ ಪಾಕಿಸ್ತಾನ ಕೋರ್ಟ್ ವಿಧಿಸಿದ ಶಿಕ್ಷೆ ಏನು??
Saturday, April 9, 2022
2008ರಲ್ಲಿ ನಡೆದ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಆದೇಶ ಹೊರಡಿಸಿದೆ.
ಹಫೀಜ್ ಸಯೀದ್ನ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ನಿರ್ದೇಶಿಸಿದ ಕೋರ್ಟ್, ಆತನನ್ನು ಲಾಹೋರ್ನ ಕೋಟ್ ಲಖ್ಪತ್ ಜೈಲಿನಲ್ಲಿ ಇರಿಸುವಂತೆ ಸೂಚಿಸಿದ್ದು, ಜತೆಗೆ 3 ಲಕ್ಷದ 40 ಸಾವಿರ ದಂಡ ವಿಧಿಸಿದೆ.