
ಉಡುಪಿ ; ಜಯ ದುರ್ಗೆಗೆ ಕೋಟಿ ಕುಂಕುಮಾರ್ಚನೆ- ಇದು ದಕ್ಷಿಣ ಭಾರತದಲ್ಲಿ ಪ್ರಥಮ
ಉಡುಪಿಯ ಇತಿಹಾಸ ಪ್ರಸಿದ್ಧ, ಸುಮಾರು 5 ಸಾವಿರಕ್ಕೂ ಹೆಚ್ಚಿನ ಇತಿಹಾಸ ಇರುವ, ಕಣ್ವ ಮಹರ್ಷಿಗಳ ತಪಸ್ಸಿಗೊಳಿದ ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಸದ್ಯ ಅದ್ದೂರಿಯಾಗಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯುತ್ತಿದೆ..
ಇದರ ಪ್ರಯುಕ್ತ ಲೋಕ ಕಲ್ಯಾಣ ಕಲ್ಯಾಣಕ್ಕಾಗಿ ಭಕ್ತರೊಡಗೂಡಿ ಕೋಟಿ ಕುಂಕುಮಾರ್ಚನೆ ಸೇವೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನೆರವೇರಿಸಲಾಯಿತು.
ಮಾರ್ಚ್ 15ರಿಂದಲೇ ದೇಗುಲದಲ್ಲಿ ಅಷ್ಟೋತ್ತಗಳೊಂದಿಗೆ ಜಯದುರ್ಗೆಗೆ ಪ್ರಾರ್ಥನೆ ಸಲ್ಲಿಸಿ ಕುಂಕುಮಾರ್ಚನೆ ಆರಂಭಿಸಲಾಗಿತ್ತು.. 250 ರಿಂದ 300 ಭಕ್ತರು ಸರದಿಯಲ್ಲಿ ದೇಗುಲಕ್ಕೆ ಬಂದು ಕುಂಕುಮಾರ್ಚನೆ ನೆರವೇರಿಸಿದ್ದಾರೆ. ಇಂದು ಕುಂಕುಮಾರ್ಚನೆ ಮಂಗಳೋತ್ಸವ ನೆರವೇರಿತು..