
Mangalore- ಹಂಪನಕಟ್ಟೆ ಸಿಗ್ನಲ್ ನಲ್ಲಿ ನಡೆದ ಭೀಕರ ಅಪಘಾತದ CCTV ದೃಶ್ಯ
Friday, April 8, 2022
ಮಂಗಳೂರಿನ ಹಂಪನಕಟ್ಟೆ ಯಲ್ಲಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಬೈಕ್ ಮತ್ತು ಬಸ್ ಬೆಂಕಿಗೆ ಸುಟ್ಟು ಹೋದ ಘಟನೆ ನಡೆದಿತ್ತು.
ಹಂಪನಕಟ್ಟೆ ಸಿಗ್ನಲ್ ನಲ್ಲಿ ಸ್ಟೇಟ್ ಬ್ಯಾಂಕ್ ಕಡೆಗೆ ಬರುತ್ತಿದ್ದ ಬಸ್ ಗೆ ಕೆ ಎಸ್ ರಾವ್ ರಸ್ತೆ ಕಡೆಯಿಂದ ವೆಲೆನ್ಸಿಯ ಕಡೆಗೆ ಹೋಗುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡರೆ, ಬೈಕನ್ನು ಬಸ್ ಎಳೆದುಕೊಂಡು ಹೋಗಿತ್ತು. ಕೆಲವೆ ಸೆಕೆಂಡ್ ನಲ್ಲಿ ಬೈಕ್ ಗೆ ಬೆಂಕಿ ಹತ್ತಿ ದ್ದು ಬೆಂಕಿ ವ್ಯಾಪಿಸಿ ಬಸ್ ಕೂಡ ಸುಟ್ಟು ಹೋಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಕೂಡಲೇ ಬಸ್ ನಿಂದಿಳಿದು ಪಾರಾಗಿದ್ದಾರೆ.
ಬೈಕ್ ಮತ್ತು ಬಸ್ ಅಪಘಾತವಾಗುವ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ