ಬೆಳಗಾವಿಯಲ್ಲಿ ಪತ್ತೆಯಾದ ಪಾಕಿಸ್ತಾನದ ನೋಟು
Saturday, April 9, 2022
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಯುವಕನೋರ್ವನಿಗೆ ಪಾಕಿಸ್ತಾನದ ನೋಟು ಬಿದ್ದು ಸಿಕ್ಕಿದ್ದು, ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಕರೋಶಿಯ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕನಿಗೆ ನೋಟೊಂದು ಬಿದ್ದಿರುವುದು ಕಂಡುಬಂದಿದ್ದು, ಸಿಕ್ಕ ನೋಟನ್ನು ಯುವಕನು ಚಿಕ್ಕೋಡಿ ಪೊಲೀಸ ಠಾಣೆಗೆ ಒಪ್ಪಿಸಿದ್ದಾನೆ.
ನೋಟು ಪಾಕಿಸ್ತಾನದ 10 ರೂ. ಮುಖಬೆಲೆಯ ನೋಟು ಎಂದು ತಿಳಿದುಬಂದಿದೆ.