First Night ಗೇ ವರನ ಮುಂದೆ 'ಆ ಘಟನೆ' ಬಿಚ್ಚಿಟ್ಟ ವಧು
Saturday, April 9, 2022
ಮಧ್ಯಪ್ರದೇಶ: ಮದುವೆಯಾದ ಮೊದಲ ರಾತ್ರಿಯೇ ಗಂಡನ ಮುಂದೆ ಕಹಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದಕ್ಕಾಗಿ ದಂಪತಿಗಳು ಬೇರ್ಪಟ್ಟ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಕುಟುಂಬದ ಸಮ್ಮುಖದಲ್ಲಿ ಅದ್ದೂರಿಯಾಗಿ ಜೋಡಿ ಮದುವೆಯಾಗಿತ್ತು. ಮೊದಲ ರಾತ್ರಿ ಪರಸ್ಪರ ನೆನಪು ಹಂಚಿಕೊಳ್ಳುತ್ತಿದ್ದಾಗ, ಯುವತಿಯು ಮದುವೆಗೂ ಮುಂಚೆ ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಷಯವನ್ನು ಪತಿ ಮುಂದೆ ಹೇಳಿದ್ದಳು. ತನ್ನ ಸಂಬಂಧಿಯಿಂದಲೇ ದುಷ್ಕೃತ್ಯಕ್ಕೊಳಗಾಗಿರುವುದಾಗಿ ಆಕೆ
ವಿವರಿಸಿದ್ದಳು. ಈ ಮಾತು ಕೇಳಿ ದಿಢೀರ್ ಶಾಕ್ಗೊಳಗಾಗಿರುವ ಗಂಡ, ತನ್ನ ಸಂಬಂಧಿಕರ ಮುಂದೆ ಮಾಹಿತಿ ಹಚ್ಚಿಕೊಂಡಿದ್ದಾನೆ. ಇಷ್ಟೇ ಅಲ್ಲ, ಆಕೆಯಿಂದ ವಿಚ್ಛೇದನ ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದಾನೆ.
2019ರಲ್ಲಿ ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.