
ಈ ಕಣಿವೆಯ ಜನರಿಗೆ ಈವರೆಗೂ cancer ಬಂದಿಲ್ಲ - ಇಲ್ಲಿ 90 ವರ್ಷದಲ್ಲೂ ಮಹಿಳೆಯರು ಗರ್ಭಧಾರಣೆ ಮಾಡ್ತಾರೆ
ಇಸ್ಲಾಮಾಬಾದ್: ಉತ್ತರ ಪಾಕಿಸ್ತಾನದಲ್ಲಿ ಹುಂಜಾ ಎಂಬ ಕಣಿವೆ ಇದೆ. ಈ ಕಣಿವೆಯಲ್ಲಿ ವಾಸಿಸುವ ಸಮುದಾಯದ ಜನರ ಬಗ್ಗೆ ಹಲವಾರು ಸಂಶೋಧನೆಗಳು ಮತ್ತು ವರದಿಗಳು ಪ್ರಕಟವಾಗಿದೆ.
ಈ ವರದಿಗಳ ಪ್ರಕಾರ, ಈ ಕಣಿವೆಯಲ್ಲಿ ವಾಸಿಸುವ ಜನರು ದೈಹಿಕವಾಗಿ ಎಷ್ಟು ಬಲಶಾಲಿಗಳಾಗಿದ್ದಾರೆಂದರೆ, ಯಾವುದೇ ರೋಗವು ಅವರ ಹತ್ತಿರಕ್ಕೂ ಸುಳಿದಿಲ್ಲ. ಅವರು ವಿಶ್ವದ ದೀರ್ಘಕಾಲ ಬದುಕಿದ, ಸಂತೋಷಭರಿತ ಮತ್ತು ಆರೋಗ್ಯವಂತ ಜನರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಸರಾಸರಿ ಜೀವಿತಾವಧಿ ಸುಮಾರು 120 ವರ್ಷಗಳು, ಇದು ಯಾವುದೇ ದೇಶದ ಯಾವುದೇ ಸಮುದಾಯಕ್ಕಿಂತ ಹೆಚ್ಚಾಗಿದೆ.
ಹುಂಜಾ ಕಣಿವೆಯು ಒಂದು ಬೆಟ್ಟದಲ್ಲಿ ನೆಲೆಗೊಂಡಿದೆ. ಈ ಬೆಟ್ಟದ ಮೇಲಿರುವ ಹಳ್ಳಿಗಳು ಸಾವಿರಾರು ವರ್ಷ ಹಳೆಯದು.
ಇಲ್ಲಿನ ಯಾರಿಗೂ ಈವರೆಗೆ ಕ್ಯಾನ್ಸರ್ ಬಂದಿಲ್ಲ. ಇಲ್ಲಿನ ಮಹಿಳೆಯರು 60 ರಿಂದ 90ನೇ ವಯಸ್ಸಿನಲ್ಲೂ ಗರ್ಭಿಣಿಯಾಗುವ ಸಾಮರ್ಥ್ಯವನ್ನ ಹೊಂದಿದ್ದಾರೆ.
ಇಲ್ಲಿನ ಜನರ ಪ್ರತಿರಕ್ಷಣಾ ವ್ಯವಸ್ಥೆಯು ಅದ್ಭುತವಾಗಿದೆ. ಅವರು ವೃದ್ಧಾಪ್ಯದವರೆಗೂ ಸದೃಢವಾಗಿರುತ್ತಾರೆ