IPS ಸೇವೆಗೆ ರಾಜೀನಾಮೆ ಕೊಟ್ಟ ಭಾಸ್ಕರ್ ರಾವ್ ಯಾವ ಪಕ್ಷ ಸೇರ್ತಾರೆ ಗೊತ್ತಾ?
Sunday, April 3, 2022
ಬೆಂಗಳೂರು: ಇತ್ತೀಚೆಗಷ್ಟೆ ರೈಲ್ವೆ ಪೊಲೀಸ್ ಎಡಿಜಿಪಿ ಆಗಿದ್ದ, ಅಲ್ಲಿಂದ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದ IPS ಅಧಿಕಾರಿ ಬಿ.ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ (ಎಎಪಿ) ಸೇರಲಿದ್ದಾರೆ.
ನವದೆಹಲಿಯ AAP ಪಕ್ಷದ ಕಚೇರಿಯಲ್ಲಿ ಸೋಮವಾರ ಭಾಸ್ಕರ್ ರಾವ್ ಪಕ್ಷ ಸೇರಲಿದ್ದಾರೆ. ಈ ಸಂದರ್ಭ ಪಕ್ಷದ ಹಿರಿಯ ಮುಖಂಡ ಮನೀಷ್ ಸಿಸೋಡಿಯಾ ಮತ್ತಿತರರ ಪಕ್ಷದ ಹಿರಿಯರು ಹಾಜರಿರಲಿದ್ದಾರೆ.
ಭಾಸ್ಕರ್ ರಾವ್ ಎಎಪಿ ಸೇರಿದ ಬಳಿಕ ಕರ್ನಾಟಕದಲ್ಲಿ ಪಕ್ಷ ಹೊಸ ವರ್ಚಸ್ಸು ಪಡೆಯಲಿದೆ ಎನ್ನಲಾಗುತ್ತಿದೆ.