
ಗಂಗೊಳ್ಳಿಯಲ್ಲಿ ಬೋಟ್ ಮುಳುಗಡೆ- 5 ಮಂದಿಯ ರಕ್ಷಣೆ
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಅಲೆಗಳ ರಭಸಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಉಡುಪಿಯ ಗಂಗೊಳ್ಳಿಯಲ್ಲಿ ನಡೆದಿದೆ.
ಬೋಟ್‌ನಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ. ಉಡುಪಿಯ ಉದ್ಯಾವರದ ಮಹಮ್ಮದ್ ಹನೀಫ್ ಎಂಬುವವರಿಗೆ ಸೇರಿದ ಮನಾಲ್ ಬೋಟ್ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ, ಉಡುಪಿಯ ಗಂಗೊಳ್ಳಿ ತಲುಪುತ್ತಿದ್ದಂತೆ, ಅಲೆಗಳ ಅಬ್ಬರಕ್ಕೆ ಸಿಲುಕಿ, ಇಂಜಿನ್ ಕೆಳಭಾಗದ ಪೈಬರ್ ಶೀಟ್ ಒಡೆದ ಬೋಟ್ ಒಳಗಡೆ ನೀರು ಬರಲಾರಂಬಿಸಿತು. ಕೂಡಲೇ ಪಕ್ಕದಲ್ಲಿ ಇದ್ದ ಶ್ರೀ ರಕ್ಷಾ ಬೋಟ್‌ನ ಮೀನುಗಾರರು ಮುಳುಗಡೆ ಆಗುತ್ತಿದ್ದ ಬೋಟ್‌ನಲ್ಲಿ ಇದ್ದ ಐವರನ್ನು ರಕ್ಷಣೆ ಮಾಡಿದ್ದಾರೆ.
ಆದರೆ ಬೋಟ್ ರಕ್ಷಣೆ ಮಾಡಲು ಸಾಧ್ಯವಾಗದೇ ಮುಳುಗಡೆಯಾಗಿದೆ. ಈ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 25,00,000 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ..