-->

ಭೀಕರ ರಸ್ತೆ ಅಪಘಾತ, ಬಿಜೆಪಿ ಮುಖಂಡನ ಕಾಲು ಕಟ್: ಐವರಿಗೆ ಗಂಭೀರ ಗಾಯ

ಭೀಕರ ರಸ್ತೆ ಅಪಘಾತ, ಬಿಜೆಪಿ ಮುಖಂಡನ ಕಾಲು ಕಟ್: ಐವರಿಗೆ ಗಂಭೀರ ಗಾಯ

ಕಲಬುರಗಿ: ನಿಯಂತ್ರಣ ತಪ್ಪಿದ ಕಾರೊಂದು ಭೀಕರವಾಗಿ ಅಪಘಾತಕ್ಕೀಡಾಗಿದ್ದು, ಬಿಜೆಪಿ ಮುಖಂಡ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಹೊರವಲಯದ ಶಹಬಾದ ರಸ್ತೆಯಲ್ಲಿ ನಡೆದಿದೆ.

ಶಹಬಾದ ರಸ್ತೆಯ ಕೇಂಬ್ರಿಡ್ಜ್​ ಶಾಲೆಯ ಬಳಿ ಈ ಅಪಘಾತವಾಗಿದೆ. ಈ ಅಪಘಾತದಲ್ಲಿ ಬಿಜೆಪಿ ಗ್ರಾಮಾಂತರ ಯುವ ಮೋರ್ಚದ ಮುಖಂಡ ವೀರೇಂದ್ರ ಪಾಟೀಲ್ ರಾಯಕೋಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಐವರೂ ಕಲಬುರಗಿಯ ಜಗತ್ ಬಡಾವಣೆಯ ನಿವಾಸಿಗಳಾಗಿದ್ದಾರೆ. ಈ ಅಪಘಾತದಲ್ಲಿ ವೀರೇಂದ್ರ ಪಾಟೀಲ್ ಅವರು ಕಾಲು ತುಂಡಾಗಿದ್ದರೆ, ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಬಗ್ಗೆ ಕಲಬುರಗಿ ಸಂಚಾರಿ ಠಾಣೆ 2ರಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99