
'ನಿಮಗೆ ಉಪವಾಸ ಇದೆಯೇ?' ಎಂದು ರೈಲಿನ ಪ್ಯಾಂಟ್ರಿ ಸಿಬ್ಬಂದಿ ಕೇಳಿದ - ಹೌದು ಎಂದ ಬಳಿಕ ನಡೆದದ್ದೇ ಅಚ್ಚರಿ!
Sunday, May 1, 2022
ರಾಂಚಿ: ರಂಝಾನ್ ಉಪವಾಸ ನಿರತನಾಗಿದ್ದ ರೈಲು ಯಾತ್ರಿಕನಿಗೆ ಇಂಡಿನ್ ರೈಲ್ವೇ ನೀಡಿರುವ ಸರ್ಪೈಸ್ ಈಗ ಎಲ್ಲೆಡೆ ಸುದ್ದಿಯಾಗಿದೆ. ಈ ಬಗ್ಗೆ ಸ್ವತಃ ಯಾತ್ರಿಕನೇ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಹೌರಾ-ರಾಂಚಿ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಹನವಾಜ್ ಅಖ್ತರ್ ಬಳಿ ಬಂದ ಪ್ಯಾಂಟ್ರಿ ಸಿಬ್ಬಂದಿ ಚಹಾ ವಿಚಾರಿಸಿದಾಗ ನನಗೆ ಉಪವಾಸವಿದ್ದು, ತಡವಾಗಿ ಚಹಾ ತನ್ನಿ ಎಂದಿದ್ದರು. ಪ್ರಯಾಣಿಕ ಉಪವಾಸ ವ್ರತದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಸಿಬ್ಬಂದಿ, ಉಪವಾಸ ತೊರೆಯುವ ವೇಳೆ ಇಫ್ತಾರ್ ಆಹಾರಗಳೊಂದಿಗೆ ಶಹನವಾಝ್ ಬಳಿ ಬಂದು ಅಚ್ಚರಿ ಮೂಡಿಸಿದ್ದರು.
ಈ ಬಗ್ಗೆ ಸ್ವತ ಪ್ರಯಾಣಿಕನೇ ಇಪ್ತಾರ್ ಉಪಹಾರದ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾನೆ.