ಉಡುಪಿಯ ಹೆಡ್ ಕಾನ್ಸ್ಟೇಬಲ್ ಸಾವಿಗೆ ಹೊಸ ಟ್ವಿಸ್ಟ್
Sunday, May 1, 2022
ಉಡುಪಿಯ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಸಾವು ಪ್ರಕರಣ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಾಗಿದೆ.
ಕರ್ತವ್ಯದಲ್ಲಿದ್ದಾಗಲೇ ರೈಫಲ್ ನಿಂದ ಗುಂಡು ತಗಲಿ ರಾಜೇಶ್ ಕುಂದರ್ ಶುಕ್ರವಾರ ಮೃತಪಟ್ಟಿದ್ದರು. ಇದೀಗ ಪ್ರಕರಣ ಟ್ವಿಸ್ಟ್ ಪಡೆದಿದ್ದು, ಗಂಗೊಳ್ಳಿ ಠಾಣಾ ಎಸ್ಸೈ ಹಾಗೂ ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಪ್ರಕರಣ ನಡೆದ ತಕ್ಷಣ ಇದೊಂದು ಆಕಸ್ಮಿಕ ಸಾವು ಎಂದು ದೂರು ದಾಖಲಿಸಲಾಗಿತ್ತು. ಆದರೆ ಇದೀಗ ಆತ್ಮಹತ್ಯೆ ಅನ್ನೋದು ಖಚಿತವಾಗಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗಂಗೊಳ್ಳಿ ಠಾಣಾ ಎಸೈ ನಂಜನಾಯ್ಕ್ ಮತ್ತಿಬ್ಬರು ಸಿಬ್ಬಂದಿಗಳಾದ ಮತ್ತು ಉಮೇಶ್ ಮತ್ತು ಅಶ್ಫಕ್ ಎಂಬವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.