
Eid-ul- fitr: ಮಂಗಳವಾರ ಇದ್ದ ಸರಕಾರಿ ರಜೆ ಸೋಮವಾರಕ್ಕೆ ಆದೇಶಿಸಿದ್ದಕ್ಕೆ ಅಸಮಾಧಾನ
Sunday, May 1, 2022
ಚಂದ್ರ ದರ್ಶನ ಸಮಿತಿ ಹೇಳಿದ್ದೇನು?
ಬೆಂಗಳೂರು: ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮೇ 3 ರಂದು ಪ್ರಕಟಿಸಲಾಗಿದ್ದ ಈದುಲ್ ಫಿತರ್ ಹಬ್ಬದ ರಜೆಯನ್ನು ಸೋಮವಾರ (ಮೇ 2) ಕ್ಕೆ ಸರಕಾರ ಆದೇಶ ಹೊರಡಿಸಿದ್ದು, ಇದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಹಬ್ಬವನ್ನು ಮೇ 2 ರಂದು ಆಚರಿಸಲು ಮೂನ್ ಕಮಿಟಿ ತೀರ್ಮಾನಿಸಿರುವುದರಿಂದ ಅದೇ ದಿನ ರಜೆ ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ ಸರಕಾರದ ಈ ಕ್ರಮಕ್ಕೆ ಕರ್ನಾಟಕ ರಾಜ್ಯ ಚಂದ್ರ ದರ್ಶನ (ಮೂನ್ ಕಮಿಟಿ) ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, ಚಂದ್ರದರ್ಶನದ ಬಳಿಕವೇ ಹಬ್ಬವನ್ನು ನಿರ್ಧರಿಸಲಾಗುತ್ತದೆ ಎಂದು ಸಮಿತಿ ಹೇಳಿದೆ.