Hijab girl ಮಸ್ಕಾನ್ ಬೆಂಬಲಕ್ಕೆ ನಿಂತ ಸಚಿವ ಸುಧಾಕರ್
Thursday, April 7, 2022
ಬೆಂಗಳೂರು: ಹಿಜಾಬ್ ಹೋರಾಟದಲ್ಲಿ ಸುದ್ದಿಯಾಗಿದ್ದ ಮಂಡ್ಯದ ಹುಡುಗಿ ಮುಸ್ಕಾನ್ ಬೆಂಬಲಕ್ಕೆ ಅಲ್‌ಖೈದಾ ನಿಂತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, ಮುಸ್ಕಾನ್ ಮುಗ್ಧ ಹುಡುಗಿ, ಅಲ್ಖೈದಾದಿಂದ ಜನರ ಮುಗ್ಧತೆ ಅಸ್ತ್ರವಾಗಿ ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ. ಇಂತಹ ಭಯೋತ್ಪಾದಕ ಸಂಘಟನೆಗಳಿಂದ ಇದಕ್ಕಿಂತ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಭಾಷೆ, ಧರ್ಮ ಬದಿಗಿಟ್ಟು ಶಿಕ್ಷಣಕ್ಕೆ ಗೌರವ ನೀಡಬೇಕಿದೆ. ಎಲ್ಲದರಲ್ಲೂ ಒಗ್ಗಟ್ಟಿರಬೇಕು. ಧರ್ಮ, ಭಾಷೆ ಭಿನ್ನತೆ ನಡುವೆಯೂ ಏಕತೆ ಇರಬೇಕು ಎಂದು ಸಚಿವರು ಹೇಳಿದರು.