ಉಡುಪಿ; ಸಮುದ್ರ ಪಾಲಾಗಿದ್ದ ಮತೋರ್ವ ಕೇರಳದ ವಿದ್ಯಾರ್ಥಿಯ ಶವ ಪತ್ತೆ
Thursday, April 7, 2022
ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಸಮುದ್ರಪಾಲಾಗಿದ್ದ ಮತೋರ್ವ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ಅಂಟೋನಿ ಶೆಣೈ ಮುಳುಗಡೆ ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ. ಅಲೆನ್ ರೇಜಿ, ಅಮಲ್ ಹಾಗೂ ಸಿ ಅನಿಲ್ ಮೃತ ದೇಹ ಮಧ್ಯಾಹ್ನ ವೇಳೆಗೆ ಪತ್ತೆಯಾಗಿತ್ತು.
ಒಟ್ಟು ಮೂವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರು.. ಕೇರಳದ ಕೊಟ್ಟಾಯಂ ಮೂಲದ ಮಂಗಳ ಇಂಜಿನಿಯರಿಂಗ್ ಕಾಲೇಜಿನ 42 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿಗಳು ಉಡುಪಿಯ ಮಲ್ಪೆಗೆ ಪ್ರವಾಸ ಬಂದಿದ್ದವರು, ಇಂದು ಸೈಂಟ್ ಮೇರಿಸ್ ದ್ವೀಪಕ್ಕೆ ತೆರೆಳಿ ನೀರಿನಲ್ಲಿ ಆಟವಾಡುತ್ತಿದಾಗ ಈ ದುರ್ಘಟನೆ ನಡೆದಿತ್ತು.. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...