
Hubli: ತಿರುವು ಪಡೆದ Love Jihad ಪ್ರಕರಣ - ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದ ಯುವತಿಯಿಂದ ವೀಡಿಯೋ ರಿಲೀಸ್
Thursday, April 7, 2022
ಹುಬ್ಬಳ್ಳಿ: ಭಾರೀ ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ ಈಗ ತಿರುವು ಪಡೆದುಕೊಂಡಿದೆ.
ಹುಬ್ಬಳ್ಳಿಯ ಕಮರಿಪೇಟೆ ನಿವಾಸಿ ಸ್ನೇಹಾಳನ್ನು ಇಬ್ರಾಹಿಂ ಎಂಬ ಯುವಕ ಪ್ರೀತಿಸುತ್ತಿದ್ದು, ಏ.2ರಂದು ಗದಗದಲ್ಲಿ ಈ ಜೋಡಿ ರಿಜಿಸ್ಟ್ರಾರ್ ಮದುವೆಯಾಗಿದ್ದರು. ಆದರೆ ಯುವತಿ ಪೋಷಕರು ಇದು ಲವ್ ಜಿಹಾದ್ ಎಂದು ಆರೋಪಿಸಿ ಯುವಕನ ಮನೆಮುಂದೆ ಪ್ರತಿಭಟನೆಯನ್ನೂ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ, ಯುವತಿ ತಾನು ಒಪ್ಪಿಗೆಯಿಂದಲೇ ವಿವಾಹವಾಗಿದ್ದು, ತನ್ನ ಮೇಲೆ ಯಾವುದೇ ಒತ್ತಡವಿಲ್ಲ. ತಾನು ಇಬ್ರಾಹಿಂ ನನ್ನು ಪ್ರೀತಿಸುತ್ತಿದ್ದು, ಆತನ ಜತೆಯೇ ಇದ್ದೇನೆ. ಆದರೆ ತಾನು ಆತನ ಜತೆಗಿರುವುದು ಇಬ್ರಾಹಿಂ ಮನೆಯವರಿಗೆ ತಿಳಿದಿಲ್ಲ ಎಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾಳೆ.