5 ದೋಸೆ, 2 ಮೊಟ್ಟೆ ಕರಿಗೆ 184 ರೂ. - ಹೊಟೇಲ್ ವಿರುದ್ಧ ದೂರು ನೀಡಿದ MLA ಗೆ ಜಿಲ್ಲಾಧಿಕಾರಿ ಕೊಟ್ಟ ಉತ್ತರವೇನು?
Thursday, April 7, 2022
ಆಲಪ್ಪುಝ: ಬ್ರೇಕ್ಫಾಸ್ಟ್ಗೆ ದುಬಾರಿ ದರ ವಿಧಿಸಿದ ಹೋಟೆಲ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೇರಳದ ಆಲಪ್ಪುಝ ಕ್ಷೇತ್ರದ ಶಾಸಕ ಚಿತ್ತರಂಜನ್ ನೀಡಿರುವ ದೂರಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿ ರೇಣುರಾಜ್ ತಿಳಿಸಿದ್ದಾರೆ.
ಆಳಪ್ಪುಝದ ಹೊಟೇಲೊಂದು, ಐದು ದೋಸೆ ಮತ್ತು ಎರಡು ಮೊಟ್ಟೆ ಕರಿಗೆ 184 ರೂಪಾಯಿ ಚಾರ್ಜ್ ಮಾಡಿದೆ. ಇದು ದುಬಾರಿಯಾಗಿದ್ದು, ಹೋಟೆಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಚಿತ್ತರಂಜನ್ ಹೋಟೆಲ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.