ವಿಹಿಂಪ, ಬಜರಂಗದಳದ ದ್ವೇಷಕ್ಕೆ ಮುಚ್ಚಿ ಹೋಯಿತು 72 ವರ್ಷದ ವೃದ್ಧೆಯ ಅನ್ನದ ಬಟ್ಟಲು
Friday, April 8, 2022
ಹಾಸನ: ಸುಮಾರು 40 ವರ್ಷಗಳಿಂದ ದೇವಸ್ಥಾನದ ಕಟ್ಟಡದಲ್ಲಿ ಬಳೆ ವ್ಯಾಪಾರ ಮಾಡಿಕೊಂಡಿದ್ದ ಮುಸ್ಲಿಂ ವೃದ್ಧೆಯ ಅಂಗಡಿಯನ್ನು ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ತೆರವುಗೊಳಿಸಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರಿನ 12ನೇ ಶತಮಾನದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದಿದೆ.
ಕಳೆದ 40 ವರ್ಷಗಳಿಂದ 72 ವರ್ಷದ ನೂರ್ ಜಹಾನ್ ಇಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದರು. ಈ ಆದಾಯದ ಮೂಲಕವೇ ಅವರು ತಮ್ಮ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳನ್ನು ಸಾಕುತ್ತಿದ್ದರು. ಇದೀಗ ಅಂಗಡಿ ಬಿಡಲು ಹೇಳಿರುವುದರಿಂದ ಜೀವನೋಪಾಯಕ್ಕೆ ದಿಕ್ಕೇ ತೋಚದಾಗಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಒತ್ತಡದ ಮೇರೆಗೆ ಆಡಳಿರ ಸಮಿತಿ ಅಂಗಡಿ ತೆರವಿಗೆ ನೋಟಿಸ್ ಜಾರಿಗೊಳಿಸಿ ಅಂಗಡಿಯನ್ನು ಮುಚ್ಚಿಸಿದೆ ಎಂದು ತಿಳಿದುಬಂದಿದೆ.