ಬ್ಯಾರಿ ಅಕಾಡಮಿಯಿಂದ ರಹೀಂ ಉಚ್ಚಿಲ ಪದಚ್ಚ್ಯುತಿಗೆ ನೈಜ ಕಾರಣ 'ಇದು' ಆಗಿರಬಹುದಾ?
Friday, April 8, 2022
ಮಂಗಳೂರು: ಸಂಘಪರಿವಾರ ಮತ್ತು ಕೆಲ ಬಿಜೆಪಿ ನಾಯಕರ ವಿರೋಧದ ನಡುವೆಯೂ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್, ಮಂಗಳೂರಿನ ತೊಕ್ಕೊಟ್ಟು ಬಳಿ ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಾಗಿದ್ದೇ ಅವರ ಅಧ್ಯಕ್ಷ ಗಾದಿ ವಜಾಕೆ ಕಾರಣ ಎಂದು ಹೇಳಲಾಗುತ್ತದೆ.
ತೊಕ್ಕೊಟ್ಟುವಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬ್ಯಾರಿ ಭವನದ ಕಟ್ಟಡದ ಶಂಕು ಸ್ಥಾಪನೆ ವೇಳೆ ಬಿಜೆಪಿ ಮತ್ತು ಸಂಘಪರಿವಾರದ ಕೆಲ ನಾಯಕರು ಪ್ರತಿಭಟನೆಯನ್ನೂ ಮಾಡಿದ್ದರು. ಆದರೂ ಅವರ ವಿರೋಧವನ್ನೂ ಲೆಕ್ಕಿಸದೆ ರಹೀಂ ಉಚ್ಚಿಲ ಶಂಕುಸ್ಥಾಪನೆ ಮಾಡಿದ್ದರು.
ಅಲ್ಲದೇ ಎರಡು ಬಾರಿಯೂ ಶಂಕುಸ್ಥಾಪನೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಸುನೀಲ್ ಕುಮಾರ್ ಭಾಗವಹಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ರಹೀಂ ಉಚ್ಚಿಲ ವಿರುದ್ಧ ರಾಜ್ಯ ನಾಯಕರಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತದೆ.