ಉಡುಪಿ-ವಕೀಲರ ಸಂಘದಿಂದ ಯಕ್ಷಗಾನ ಸೇವೆ
Sunday, March 6, 2022
ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನಗರದ ಕೋರ್ಟ್ ಆವರಣದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಸೇವೆ ನಡೆಯಿತು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆಯವರಿಂದ
ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ನಡೆದ ಯಕ್ಷಗಾನ ಬಯಲಾಟ ನೆರೆದಿದ್ದವರನ್ನು ರಂಜಿಸಿತು.
ಕೋರ್ಟ್ ಕೆಲಸದ ಒತ್ತಡ ಮರೆತು ವಕೀಲರು,ಅವರ ಕುಟುಂಬದ ಸದಸ್ಯರು ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಆಸ್ವಾದಿಸಿದರು